ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೆಸರಲ್ಲಿ ಕೋಟಿಗಟ್ಟಲೆ ವಂಚನೆ.!

2019ರ ಎಪ್ರಿಲ್ 1ಕ್ಕಿಂತ ಮೊದಲು ಖರೀದಿ ಮಾಡಿದ ವಾಹನಗಳಿಗೆ ಉನ್ನತ ಸುರಕ್ಷತಾ ನೋಂದಣಿ ಫಲಕ ಕಡ್ಡಾಯವಾಗಿ ಅಳವಡಿಸಬೇಕು ಎಂಬ ಸಾರಿಗೆ ಇಲಾಖೆಯ ಆದೇಶ ಹೊರಡಿಸಿದೆ. ಇದಾದ ಬಳಿಕ 700 ಕೋಟಿ ರು.ಗ‍ಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಲಾಗಿದೆ.

 

ಎಚ್‌ಎಸ್‌ಆರ್‌ಪಿ ತಯಾರಕರಿಂದ ಹಳೆಯ ಮತ್ತು ಹೊಸ ವಾಹನಗಳಿಗೆ ಖಾಲಿ ನೋಂದಣಿ ಫಲಕಗಳನ್ನು ಖರೀದಿ ಮಾಡಬೇಕಾಗುತ್ತದೆ. ವಿತರಕರು ಈ ಫಲಕಗಳ ಮೇಲೆ ನೋಂದಣಿ ಸಂಖ್ಯೆಯನ್ನು ಉಲ್ಲೇಖಿಸಬೇಕಾಗುತ್ತದೆ. ಇದಾದ ಬಳಿಕ ಹಳೆಯ ವಾಹನಗಳ ಮಾಲೀಕರಿಗೆ ಎಚ್‌ಎಸ್‌ಆರ್‌ಪಿಗಳನ್ನು ಮಾರಾಟ ಮಾಡಬೇಕು. ಆದರೆ ಈ ಕ್ರಮ ಅನುಸರಿಸದೆ ಅಕ್ರಮ ಎಸಗಲಾಗುತ್ತಿದೆ. ಹಳೆಯ ವಾಹನಗಳಿಗೆ ದುಬಾರಿ ಬೆಲೆ ವಿಧಿಸಲಾಗುತ್ತಿದೆ ಎಂದು ದೂರಲಾಗಿದೆ. ಸಾರಿಗೆ ಇಲಾಖೆಯಿಂದ ಗುರುತಿಸಿದ ಮೂಲ ವಾಹನ ಉತ್ಪಾದನಕ ಕಂಪನಿಗಳು ಹಾಗೂ ಅಧಿಕೃತ ವಾಹನ ಡೀಲರ್ಗಳು ಮಾತ್ರವೇ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲು ಮಾನ್ಯತೆ ಪಡೆದಿರುತ್ತಾರೆ. ಸಾರ್ವಜನಿಕ ಅನುಕೂಲಕ್ಕಾಗಿ ಇರಬೇಕಾದ ಅಧಿಕಾರಿಗಳು ತಮ್ಮ ಸ್ಥಾನವನ್ನು ದುರುಪಯೋಗ ಮಾಡಿಕೊಂಡು ಸುಮಾರು ಎರಡು ಕೋಟಿ ಹಳೆಯ ವಾಹನಗಳ ಮಾಲೀಕರನ್ನು ಹೆಚ್ಚಿನ ದರದಲ್ಲಿ ಎಚ್‌ಎಸ್‌ಆರ್‌ಪಿ ಖರೀದಿ ಮಾಡುವ ಪರಿಸ್ಥಿತಿ ನಿರ್ಮಿಸಿದ್ದಾರೆ. ಇದರ ಜೊತೆಗೆ ಸಾರ್ವಜನಿಕ ಹಣವನ್ನು ಸಂಘಟಿತವಾಗಿ ಲೂಟಿ ಮಾಡಲಾಗುತ್ತಿದ್ದು, ಈ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಅಖಿಲ ಕರ್ನಾಟಕ ವಾಹನ ನಂಬರ್‌ ಪ್ಲೇಟ್‌ ತಯಾರಕರು ಮತ್ತು ಮಾರಾಟಗಾರರ ಸಂಘದ ಅಧ್ಯಕ್ಷ ಎಸ್‌.ಎನ್‌.ಜಿತೇಂದ್ರ ದೂರು ನೀಡಿದ್ದಾರೆಯಾಗಿದೆ.

Check Also

ಮಣಿಪಾಲ: ಕಾಲೇಜ್ ವಿದ್ಯಾರ್ಥಿ ಆತ್ಮಹತ್ಯೆ..!

ಉಡುಪಿ:  ಮಣಿಪಾಲದ ವಾಗ್ಷಾದಲ್ಲಿ ಮೂರನೇ ವರ್ಷ ಬಿಎ (ಕಲ್ನರಿ ಆರ್ಟ್ಸ್) ವಿದ್ಯಾರ್ಥಿಯಾಗಿರುವ ಬೆಂಗಳೂರಿನ ಹಿತೇಂದ್ರ (26)  ತಾನು ವಾಸವಾಗಿದ್ದ ಹಾಸ್ಟೆಲ್ …

Leave a Reply

Your email address will not be published. Required fields are marked *

You cannot copy content of this page.