

ಉಡುಪಿ: ಕೆಟಿಎಂ ಬೈಕ್ ಕಂಪೆನಿಯ ಮಾರ್ಕೆಟಿಂಗ್ ಮ್ಯಾನೇಜರ್ 18 ಲಕ್ಷ ರೂ. ಹಣವನ್ನು ದುರುಪಯೋಗಪಡಿಸಿಕೊಂಡು ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ. ನಗರದ ಗುಂಡಿಬೈಲುನಲ್ಲಿರುವ ಕೆಟಿಎಂ ಬೈಕ್‌ಗಳ ಅಧಿಕೃತ ಡೀಲರ್ ಸಂಸ್ಥೆ ಸಾನ್ವಿ ಟ್ರೇಡರ್ಸ್‌ನ ಮಾರಾಟ ವಿಭಾಗದ ಮ್ಯಾನೇಜರ್ ರೋಶನ್ ಕಳೆದ ತಿಂಗಳಿನಲ್ಲಿ ಕೆಲಸಕ್ಕೆ ಬಾರದೆ ಅನಾರೋಗ್ಯ ಕಾರಣವನ್ನು ಹೇಳಿ ಗೈರು ಹಾಜರಾಗುತ್ತಿದ್ದನು. ಈತ ಕೆಲಸಕ್ಕೆ ಬಾರದೆ, ಫೋನ್ ಸಂಪರ್ಕಕ್ಕೂ ಸಿಗದಿರುವ ಕಾರಣ ಅನುಮಾನಗೊಂಡು ಸಂಸ್ಥೆಯ ಮ್ಯಾನೇಜರ್ ಶರತ್ ಟಿ. ಮಾರಾಟದ ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಿದರು. ಆಗ ರೋಶನ್ ಜನವರಿ 3ರಿಂದ ಮಾರ್ಚ್ 13ರವರೆಗೆ 18,14,750ರೂ. ಹಣವನ್ನು ಗ್ರಾಹಕರಿಂದ ತನ್ನ ಸ್ವಂತ ಖಾತೆಗೆ ವರ್ಗಾಯಿಸಿ ದುರುಪಯೋಗ ಪಡಿಸಿಕೊಂಡು ಸಂಸ್ಥೆಗೆ ವಂಚನೆ ಎಸಗಿರುವುದು ಕಂಡುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ