
ಉಡುಪಿ: ರಾಷ್ಟ್ರೀಯ ಹೆದ್ದಾರಿಯ ಮುಖ್ಯ ರಸ್ತೆ ಹಾಗೂ ಜಿಲ್ಲಾಧಿಕಾರಿ ಕಚೇರಿಯ ರಸ್ತೆಯಲ್ಲಿ ಬೈಕ್ನಲ್ಲಿ ವೀಲಿಂಗ್ ಮಾಡಿ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ಯುವಕನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಆತ್ರಾಡಿ ನಿವಾಸಿ ಮಹಮ್ಮದ್ ಆಶಿಕ್(19) ಎಂದು ಗುರುತಿಸಲಾಗಿದೆ.
ಆಶಿಕ್ ಬೈಕ್ ನಲ್ಲಿ ಸಹಾಸವಾರನೊಂದಿಗೆ ಮಣಿಪಾಲದ ಮುಖ್ಯರಸ್ತೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡುತ್ತಾ ಸಾರ್ವಜನಿಕರ ವಾಹನ ಸಂಚಾರಕ್ಕೆ ಹಾಗೂ ಇತರರ ಜೀವಕ್ಕೆ ತೊಂದರೆ ಉಂಟು ಮಾಡುವ ರೀತಿ ವಾಹನ ಚಲಾಯಿಸಿದ್ದ. ಮಾತ್ರವಲ್ಲದೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಅದು ವೈರಲ್ ಆಗಿತ್ತು.
ಈ ಬಗ್ಗೆ ಮಾಹಿತಿ ಪಡೆದ ಮಣಿಪಾಲ ಠಾಣಾ ಪಿ.ಐ ದೇವರಾಜ್ ಟಿ.ವಿ ನೇತೃತ್ವದ ಪೊಲೀಸ್ ಉಪ ನಿರೀಕ್ಷಕರಾದ ಅನೀಲ್, ಅಕ್ಷಯ ಕುಮಾರಿ, ಸಿಬ್ಬಂದಿಗಳಾದ ವಿವೇಕ್, ಪ್ರಸನ್ನ, ಇಮ್ರಾನ್, ಸುರೇಶ್ ಶೆಟ್ಟಿ ಹಾಗೂ ಸುಕುಮಾರ್ ಶೆಟ್ಟಿ ರುದ್ರವ್ವರವರ ತಂಡ ಕಾರ್ಯಾಚರಣೆ ನಡೆಸಿ, ಆತ್ರಾಡಿ ಗ್ರಾಮದಲ್ಲಿ ಈತನನ್ನು ದಸ್ತಗಿರಿ ಮಾಡಿ ವೀಲಿಂಗ್ ಮಾಡಲು ಬಳಿಸಿದ ಸ್ಕೂಟರ್ KA.20.HC 6899 (TVS Access 125) ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಮಣಿಪಾಲ ಪೊಲೀಸರ ಈ ಕಾರ್ಯಚರಣೆಗೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
