ಉಡುಪಿ : ಇಲ್ಲಿನ ಕೆಳಪರ್ಕಳದಲ್ಲಿ ಲಾರಿಯೊಂದು ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ತಡರಾತ್ರಿ ಸಂಭವಿಸಿದೆ.ಘಟನೆಯಲ್ಲಿ ಕಾರೊಂದು ಸಂಪೂರ್ಣ ಜಖಂಗೊಂಡಿದ್ದು ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಉಡುಪಿಯಿಂದ ಹೆಬ್ರಿ ಕಡೆಗೆ ಸಂಚರಿಸುತ್ತಿದ್ದ ಭತ್ತದ ಮೂಟೆ ಹೊತ್ತ ಲಾರಿ ಚಾಲಕನ ನಿಯಂತ್ರಣ ತಪ್ಪಿ ಎರಡು ಟೂರಿಸ್ಟ್ ಕಾರುಗಳ ಮೇಲೆ ಎರಗಿದೆ. ಪರಿಣಾಮವಾಗಿ ಒಂದು ಕಾರು ಸಂಪೂರ್ಣ ಜಖಂಗೊಂಡಿದೆ. ಲಾರಿಯಲ್ಪಿದ್ದ ಬತ್ತದ ಮೂಟೆಗಳು ರಸ್ತೆಗೆ ಬಿದ್ದು ಚೆಲ್ಲಾಪಿಲ್ಲಿಯಾದವು. ತಡರಾತ್ರಿ ಈ ಅಪಘಾತ ಸಂಭವಿಸಿದ್ದು ವಾಹನದಲ್ಲಿರುವರು ಅಪಾಯದಿಂದ ಪಾರಾಗಿದ್ದಾರೆ.
ಇಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಉಡುಪಿಯಿಂದ ಪರ್ಕಳದ ಕಡೆ ಸಂಚರಿಸುವ ಹೊರ ಜಿಲ್ಲೆಯ ಮತ್ತು ಅನ್ಯ ರಾಜ್ಯಗಳ ವಾಹನ ಚಾಲಕರಿಗೆ ಗೊಂದಲ ಉಂಟಾಗುತ್ತಿದ್ದು ಪದೇಪದೆ ಅಪಘಾತಗಳು ಸಂಭವಿಸಲು ಕಾರಣ ಎಂದು ಸ್ಥಳೀಯರು ದೂರಿದ್ದಾರೆ.