ನಟ ನಟಿಯರ ಲಿಪ್ ಲಾಕ್‌ ವಿಡಿಯೋ ವೈರಲ್​..! ‘ಹೊಸ ವರ್ಷ ಕ್ಕೆ ಮದುವೆ ಸುದ್ದಿ ಕೊಟ್ಟ ನರೇಶ್‌

ಬೆಂಗಳೂರು : ‘ಹೊಸ ವರ್ಷ, ಹೊಸ ಆರಂಭ. ನಿಮ್ಮೆಲ್ಲರ ಹಾರೈಕೆ ಬೇಕು’ ಎಂದು ನರೇಶ್​ ಮತ್ತು ಪವಿತ್ರಾ ಲೋಕೇಶ್​ ಪೋಸ್ಟ್​ ಮಾಡಿದ್ದಾರೆ. ಅವರಿಬ್ಬರಿಗೆ ಸ್ನೇಹಿತರು ಮತ್ತು ಹಿತೈಷಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ನಟಿ ಪವಿತ್ರಾ ಲೋಕೇಶ್​ ಮತ್ತು ಟಾಲಿವುಡ್​ ನಟ ನರೇಶ್​ ನಡುವಿನ ಪ್ರೇಮ್​ ಕಹಾನಿ ಭಾರಿ ವಿವಾದ ಸೃಷ್ಟಿಸಿತ್ತು . ನರೇಶ್​ ಅವರ ಪತ್ನಿ ರಮ್ಯಾ ಸಾಕಷ್ಟು ಆರೋಪ ಮಾಡಿದ್ದರು. ಅವರ ಸಂಸಾರದ ಗಲಾಟೆ ಬೀದಿಗೆ ಬಂದಿತ್ತು.

ಅದಕ್ಕೆಲ್ಲ ಈಗ ಫುಲ್​ ಸ್ಟಾಪ್​ ಹಾಕಲು ನರೇಶ್​ ಮತ್ತು ಪವಿತ್ರಾ ಲೋಕೇಶ್​ ನಿರ್ಧರಿಸಿದ್ದಾರೆ. ಇಬ್ಬರೂ ಶೀಘ್ರದಲ್ಲೇ ಮದುವೆ ಆಗಲಿದ್ದಾರೆ. ಈ ಸುದ್ದಿಯನ್ನು ಅಧಿಕೃತವಾಗಿ ತಿಳಿಸುವ ಸಲುವಾಗಿ ನರೇಶ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಒಂದು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಪವಿತ್ರಾ ಲೋಕೇಶ್​ ತುಟಿಗೆ ಮುತ್ತಿಟ್ಟಿದ್ದಾರೆ. ಅವರಿಬ್ಬರಿಗೆ ಸ್ನೇಹಿತರು ಮತ್ತು ಹಿತೈಷಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ‘ಹೊಸ ವರ್ಷ, ಹೊಸ ಆರಂಭ. ನಿಮ್ಮೆಲ್ಲರ ಹಾರೈಕೆ ಬೇಕು’ ಎಂದು ಕ್ಯಾಪ್ಷನ್​ ನೀಡುವ ಮೂಲಕ ನರೇಶ್​ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. 2023ರ ಹೊಸ ವರ್ಷವನ್ನು ನರೇಶ್​ ಮತ್ತು ಪವಿತ್ರಾ ಲೋಕೇಶ್​ ತುಂಬ ರೊಮ್ಯಾಂಟಿಕ್ ಆಗಿ ಸ್ವಾಗತಿಸುತ್ತಿದ್ದಾರೆ. ಕ್ಯಾಂಡಲ್​ ಹಚ್ಚಿ, ಕೇಕ್​ ಕತ್ತರಿಸಿ, ಪರಸ್ಪರ ಸಿಹಿ ತಿನಿಸಿ ನಂತರ ತುಟಿಗೆ ಚುಂಬಿಸುತ್ತಿರುವ ವಿಡಿಯೋವನ್ನು ಈ ಜೋಡಿ ಹಂಚಿಕೊಂಡಿದೆ. ಇದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.ಯಾವುದೋ ಸಿನಿಮಾದ ಟೀಸರ್​ ಇರಬಹುದೇನೋ ಎಂಬ ರೀತಿಯಲ್ಲಿ ಈ ವಿಡಿಯೋ ಮೂಡಿಬಂದಿದೆ. ಆದ್ರೆ ಇದು ಸಿನಿಮಾ ಅಲ್ಲ, ರಿಯಲ್​. ‘ನಮ್ಮ ಪ್ರಪಂಚಕ್ಕೆ ಸ್ವಾಗತ. ಹೊಸ ವರ್ಷದ ಶುಭಾಶಯಗಳು. ಶೀಘ್ರದಲ್ಲೇ ಮದುವೆ ಆಗುತ್ತಿದ್ದೇವೆ’ ಎಂಬ ಸಾಲುಗಳು ಈ ವಿಡಿಯೋದಲ್ಲಿ ಇದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಹಲವು ತಿಂಗಳುಗಳಿಂದ ನರೇಶ್​ ಮತ್ತು ಪವಿತ್ರಾ ಲೋಕೇಶ್​ ಅವರು ಜೊತೆಯಾಗಿ ವಾಸಿಸುತ್ತಿದ್ದಾರೆ. ಅವರ ಸಂಬಂಧದ ವಿರುದ್ಧ ನರೇಶ್​ ಪತ್ನಿ ರಮ್ಯಾ ಆಕ್ಷೇಪ ವ್ಯಕ್ತಪಡಿಸಿದ್ದರೂ ಕೂಡ ಈ ಜೋಡಿ ತಲೆ ಕೆಡಿಸಿಕೊಂಡಿಲ್ಲ. ಆದರೆ ಮದುವೆ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಈ ವಿಡಿಯೋ ಹಂಚಿಕೊಳ್ಳುವ ಮೂಲಕ ನರೇಶ್​ ಅವರು ಎಲ್ಲ ಅಂತೆ-ಕಂತೆಗಳಿಗೆ ಸ್ಪಷ್ಟನೆ ನೀಡಿದಂತಾಗಿದೆ. ಸಿನಿಮಾ ಕೆಲಸಗಳಲ್ಲೂ ನರೇಶ್​ ಮತ್ತು ಪವಿತ್ರಾ ಲೋಕೇಶ್​ ಬ್ಯುಸಿ ಆಗಿದ್ದಾರೆ. ಪೋಷಕ ಪಾತ್ರಗಳ ಮೂಲಕ ಪವಿತ್ರಾ ಗಮನ ಸೆಳೆದಿದ್ದಾರೆ. ಬಹುಭಾಷೆಯಲ್ಲಿ ಅವರು ಜನಪ್ರಿಯತೆ ಪಡೆದಿದ್ದಾರೆ. ಈಗ ಅವರ ಬಾಳಿನಲ್ಲಿ ಹೊಸ ಅಧ್ಯಾಯದ ಆರಂಭಕ್ಕೆ ದಿನಗಣನೆ ಶುರುವಾಗಿದೆ.

Check Also

ಉಳ್ಳಾಲ ಬೀಚ್ ನಲ್ಲಿ ಮರಳಿನ‌ ಆಕೃತಿ ಮೂಲಕ ಮತದಾನ ಜಾಗೃತಿ

ಉಳ್ಳಾಲ: ದಿನಾಂಕ 19-04-2024 ಉಳ್ಳಾಲ ಬೀಚ್ ನಲ್ಲಿ ತಾಲೂಕು ಪಂಚಾಯತ್ ಉಳ್ಳಾಲ ಹಾಗೂ ಉಳ್ಳಾಲ ನಗರ ಸಭೆ, ಕೋಟೆಕಾರ್ ಪಟ್ಟಣ …

Leave a Reply

Your email address will not be published. Required fields are marked *

You cannot copy content of this page.