ವೇಣೂರು, ಮೇ 29: ಬೆಳ್ತಂಗಡಿ ತಾಲೂಕಿನ ವೇಣೂರು ಸನಿಹದ ಬಜಿರೆಯ ಹೊಸಪಟ್ಣ ಭಾಸ್ಕರ ಪೂಜಾರಿ ನಾಯರ್‍ಮೇರು ಮತ್ತು ಶ್ರೀಮತಿ ಅನುರಾದ ದಂಪತಿ ಪುತ್ರಿ ಆಪ್ತಿ ಪೂಜಾರಿ ಝಿ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಅಭೂತಪೂರ್ವ ಎಂಟ್ರಿ ಪಡೆದುಕೊಂಡು ಇದೀಗ ಪ್ರತೀ ವಾರವೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾಳೆ.
ಸತತ 11 ವರ್ಷದ ಪರಿಶ್ರಮದಿಂದ ನಟರಾಜನ ಅನುಗ್ರಹದೊಂದಿಗೆ, ನಮ್ಮ ಕುಡ್ಲ ಚಾನೆಲ್‌ನ ಡ್ಯಾನ್ಸ್‌ಡ್ಯಾನ್ಸ್ ಸೀಸನ್ -2 ನ ವಿಜೇತ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡು, ಸೋಲೋ ಡ್ಯಾನ್ಸ್ ಸ್ಫರ್ಧೆಯ ವಿಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದಳು.
ಕಳೆದೆರಡು ವರ್ಷದಿಂದ ಬೆಂಗಳೂರಿನಲ್ಲೇ ವಿದ್ಯಾಭ್ಯಾಸ ಪಡೆಯುತ್ತಿರುವ ಈಕೆ ಪ್ರಸ್ತುತ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
ರಿಯಾಲಿಟಿ ಶೋನ ದಿಗ್ಗಜ ಶಶಿ ಮೇಸ್ಟ್ರುವಿನಿಂದ ಆಪ್ತಿ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ.
ಭಾಸ್ಕರ ಪೂಜಾರಿ ಪೂಜಾರಿ ನಾಯರ್‍ಮೇರು ದಂಪತಿಯ ಮತ್ತೋರ್ವ ಪುತ್ರಿ ಅನ್ವಿಯೂ ಡ್ಯಾನ್ಸ್ ಮತ್ತು ಸ್ಪೋರ್ಟ್‌ನಲ್ಲೂ ಮಿಂಚುತ್ತಿದ್ದು, ಪ್ರಸ್ತುತ 9ನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾಳೆ. ಈ ಪ್ರತಿಭೆಗಳಿಗೆ ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ಕಡೆಯಿಂದ ಆಲ್ ದಿ ಬೆಸ್ಟ್.
ತೀರ್ಪುಗಾರರಿಂದ ಪ್ರಶಂಸೆ
ಕು| ಆಪ್ತಿಯ ನೃತ್ಯ ಪ್ರದರ್ಶನಕ್ಕೆ ತೀರ್ಪುಗಾರರೂ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಿಯಾಲಿಟಿ ಶೋನ ತೀರ್ಪುಗಾರರಾಗಿರುವ ನಟ ಶಿವರಾಜ್ ಕುಮಾರ್ ಈಕೆಗೆ ಕ್ವೀನ್ ಆಫ್ ಡಿ.ಕೆ.ಡಿ. (ಕರ್ನಾಟಕ ಡ್ಯಾನ್ಸ್ ಕರ್ನಾಟಕ) ಎಂದು ಬಣ್ಣಿಸಿದ್ದಾರೆ. ರಾಷ್ಟ್ರಮಟ್ಟದ ಕೊರಿಯಾಗ್ರಾಫರ್ ಚಿನ್ನಿಪ್ರಕಾಶ್ ಕೂಡಾ ಈಕೆಯ ನೃತ್ಯಕ್ಕೆ ಮನಸೋತಿದ್ದು, ಲೇಡಿಟೈಗರ್ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಶೋನ ತೀರ್ಪುಗಾರರಾದ ಅರ್ಜುನ್ ಜನ್ಯ, ನಟಿ ರಕ್ಷಿತಾ ಕೂಡಾ ಆಪ್ತಿಯ ನೃತ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಮುದ್ದು ಬಾಲಪ್ರತಿಭೆಗೆ ನಮ್ಮೆಲ್ಲರ ಆಶೀರ್ವಾದ-ಪ್ರೋತ್ಸಾಹ ವೋಟ್ ಮೂಲಕ ಬೇಕಾಗಿದ್ದು, ದಯವಿಟ್ಟು ಪ್ರತೀ ಶನಿವಾರ ಮತ್ತು ರವಿವಾರ ಸಂಜೆ 7-30ಕ್ಕೆ ಝೀ ಕನ್ನಡ ವಾಹಿನಿಯಲ್ಲಿ ವೀಕ್ಷಿಸಿ, ನಿಮ್ಮ ವೋಟನ್ನು SHAP ಎಂದು ಟೈಪ್ ಮಾಡಿ 57575 ಗೆ ಕಳುಹಿಸುವ ಮೂಲಕ ನಮ್ಮೂರಿನ ಬಾಲಪ್ರತಿಭೆ ಪ್ರೀತಿಯ ಆಪ್ತೆ ಆಪ್ತಿ ಪೂಜಾರಿಯನ್ನು ಆಶೀರ್ವದಿಸೋಣ.