ಮುದ್ದೇಬಿಹಾಳ : ನಾಗರಬೆಟ್ಟದಲ್ಲಿರುವ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕಾಲೇಜಿನ ಶೌಚಾಲಯದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕೋಮಲಾಪುರ ಗ್ರಾಮದ ಪದ್ಮಾವತಿ ಸಂಜಯ ಮೇಟಿ (17) ಎಂದು ಗುರುತಿಸಲಾಗಿದೆ.
ಬಾತ್ ರೂಂ ಒಳಗೆ ಹೋದ ವಿದ್ಯಾರ್ಥಿನಿ ನಲ್ಲಿ ನೀರು ಆನ್ ಮಾಡಿ ಪ್ಲಾಸ್ಟಿಕ್ ವಯರ್ ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಹಳ ಹೊತ್ತಾದರೂ ಹೊರಗೆ ಬಾರದ ಹಿನ್ನೆಲೆ ಕಿಟಕಿ ಮೂಲಕ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಕೊನೆಗೆ ಡೆತ್ ನೋಟ್ ಪತ್ತೆಯಾಗಿದೆ. ‘ ನನಗೆ ವಿಜ್ಞಾನ ವಿಷಯ ಓದಲು ಇಷ್ಟವಿಲ್ಲ, ಪೋಷಕರ ಮನಸ್ಸನ್ನೂ ನೋಯಿಸಲು ಇಷ್ಟವಿಲ್ಲ, ಕ್ಷಮಿಸುವಂತೆ ಕೋರಿ ಡೆತ್ ನೋಟ್ ಬರೆದಿಟ್ಟಿದ್ದಾಳೆ. ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಕುರಿತು ಪ್ರಕರಣ ದಾಖಲಾಗಿದೆ.