ಮುಂಬೈ: ಕುಡಿದ ಮತ್ತಿನಲ್ಲಿ ಮುಂಬೈ ನಿವಾಸಿಯಾಗಿದ್ದ ಯುವತಿಯೊಬ್ಬಳು ಬೆಂಗಳೂರಿನಿಂದ ಆನ್‌ಲೈನ್ ನಲ್ಲಿ ಬಿರಿಯಾನಿ ಆರ್ಡರ್ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಪ್ರತಿಷ್ಠಿತ ಮೇಘನಾ ಫುಡ್ಸ್ ಹೋಟೆಲ್‌ನಿಂದ ಮುಂಬೈ ಯುವತಿಯೊಬ್ಬಳು ಆನ್‌ಲೈನ್ ಮೂಲಕವೇ ಮುಂಬೈನಲ್ಲಿರುವ ತನ್ನ ನಿವಾಸಕ್ಕೆ ಬಿರಿಯಾನಿ ಆರ್ಡರ್ ಮಾಡಿದ್ದಾಳೆ. ಅಷ್ಟೇ ಅಲ್ಲದೇ 2500 ರೂಪಾಯಿ ಕೂಡಾ ಸಹ ಪಾವತಿಸಿದ್ದಾಳೆ. ತಿನ್ನೋದಕ್ಕೆ ಹಸಿವಾಗುತ್ತಿದ್ದರೂ ಯಾಕೆ ಇನ್ನೂ ಫುಲ್ ಬಂದಿಲ್ಲ ಎಂದು ಪರಿಶೀಲನೆ ನಡೆಸಿದಾಗ ತಪ್ಪಾಗಿದೆ ಎಂದು ತಿಳಿಯಲಾಗಿದೆ. ಈ ವಿಚಿತ್ರ ಘಟನೆಯ ಸಂಬಂಧ ಈ ಪೋಸ್ಟ್‌ಗೆ ಜೊಮ್ಯಾಟೋ ಸೇರಿದಂತೆ ಅನೇಕ ಟ್ವಿಟರ್ ಬಳಕೆದಾರರಿಂದ ಕಾಮೆಂಟ್‌ಗಳು ಬಂದಿವೆ. ಅವಳು ತಮ್ಮ ಟ್ವಿಟರ್‌ನಲ್ಲಿ ಟ್ವೀಟ್ ಮೂಲಕ ಹಂಚಿಕೊಂಡಿದ್ದು, ನಾನು ಬೆಂಗಳೂರಿನಿಂದ 2500 ರೂಪಾಯಿ ಮೌಲ್ಯದ ಬಿರಿಯಾನಿಯನ್ನು ಆರ್ಡರ್ ಮಾಡಿದ್ದೇನೆಯೇ? ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾಳೆ. ಜನವರಿ 21ರಂದು ಈ ಪೋಸ್ಟ್ ಹಾಕಲಾಗಿದ್ದು, ಮತ್ತು ಈಗಾಗಲೇ 492.5k ಬಾರಿ ವೀಕ್ಷಿಸಲಾಗಿದೆ. ಪ್ರತಿಯಾಗಿ ನೆಟ್ಟಿಗರು ಹಲವು ಕಾಮೆಂಟ್ಸ್‌ಗಳನ್ನು ಮಾಡಿದ್ದಾರೆ.