ಚಿಕ್ಕಬಳ್ಳಾಪುರ: ದೊಡ್ಡಬೆಳವಂಗಲದ ಅಜ್ಜನ ಕಟ್ಟೆ ಬಳಿ ಶಾಂತಿನಗರದಲ್ಲಿ ಪ್ರಸಿದ್ಧ ರೇಣುಕಾ ಯಲ್ಲಮ್ಮ ದೇವಿಯ ಜಾತ್ರೆ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ.
ಈ ವೇಳೆ ಭಾರಿ ದುರಂತ ನಡೆದಿದ್ದು, ಅಗ್ನಿಕೊಂಡ ಹಾಯುವಾಗ ಅರ್ಚಕಿಯೊಬ್ಬರು ಎಡವಿ ಬೆಂಕಿಗೆ ಬಿದ್ದು ಸ್ಥಿತಿ ಗಂಭೀರವಾಗಿದೆ. ಅರ್ಚಕಿ ಅನು ಜೋಗತಿ ಎಂಬುವರು ಕಳಸಾ ಹೊತ್ತು ಕೊಂಡದಲ್ಲಿ ಹೋಗುವಾಗ ಘಟನೆ ನಡೆದಿದೆ. ನಿನ್ನೆ ನಗರದಲ್ಲಿ ರೇಣುಕಾ ಯಲ್ಲಮ್ಮದೇವಿಯ ಅಗ್ನಿ ಕೊಂಡ ಹಾಯುವ ಜಾತ್ರೆ ಇತ್ತು. ಈ ವೇಳೆ ಅರ್ಚಕಿ ಕೊಂಡ ಹಾಯಲು ಮುಂದಾಗಿದ್ದು, ಭಾರಿ ಅವಘಡ ಸಂಭವಿಸಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.