ಮಂಗಳೂರು: ಭಾರೀ ಗಾಳಿ ಮಳೆಗೆ ಬೃಹತ್ ಹೋರ್ಡಿಂಗ್ ಬಿದ್ದು ವಾಹನ, ಕಟ್ಟಡಗಳಿಗೆ ಹಾನಿ

ಮಂಗಳೂರು: ಭಾರೀ ಗಾಳಿ ಮಳೆಗೆ ಕಟ್ಟಡದ ಮೇಲೆ ಹಾಕಲಾಗಿದ್ದ ಬೃಹತ್ ಹೋರ್ಡಿಂಗ್ ಕೆಳಗೆ ಬಿದ್ದು, ಕಟ್ಟಡದ ಬಳಿ ನಿಲ್ಲಿಸಿದ್ದ ಹಲವಾರು ವಾಹನಗಳಿಗೆ ಹಾನಿಯಾದ ಘಟನೆ ಜು.೫ ರ ಬುಧವಾರ ಬಿಕರ್ನಕಟ್ಟೆಯಲ್ಲಿ ಘಟನೆ ನಡೆದಿದೆ.

ಘಟನೆಯಲ್ಲಿ ಕೆಲವು ಅಂಗಡಿಗಳಿಗೂ ಹಾನಿಯಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹೋರ್ಡಿಂಗ್ ತೆರವುಗೊಳಿಸಿದರು. ಘಟನೆಯಿಂದ ನಂತೂರು-ಪಡೀಲ್ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅದೃಷ್ಟವಶಾತ್, ಹೋರ್ಡಿಂಗ್ ಮುರಿದು ಬಿದ್ದಾಗ ಕೆಳಗೆ ಯಾರೂ ಇಲ್ಲದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Check Also

ಕಾರ್ಕಳ: ಟಿಪ್ಪರ್‌ – ಸ್ಕೂಟಿ ಡಿಕ್ಕಿ : ಓರ್ವ ಸ್ಥಳದಲ್ಲೇ ಸಾವು – ಇಬ್ಬರಿಗೆ ಗಾಯ

ಕಾರ್ಕಳ : ಪಳ್ಳಿ ಗರಡಿ ರಸ್ತೆಯಲ್ಲಿ ಟಿಪ್ಪರ್ ಹಾಗೂ ಸ್ಕೂಟಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡ …

Leave a Reply

Your email address will not be published. Required fields are marked *

You cannot copy content of this page.