ಅಳದಂಗಡಿ, ಎ. 25: ಹಿರಿಯ ಸಾಹಿತಿ ಪ.ರಾ. ಶಾಸ್ತ್ರಿ ಅಭಿನಂದನಾ ಸಮಿತಿ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಬೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಸಾಹಿತಿ ಪ.ರಾ. ಶಾಸ್ತ್ರಿಯವರ ಅಭಿನಂದನಾ ಕಾರ್ಯಕ್ರಮಕ್ಕೆ ಆಗಮಿಸಲು ಖಾವಂದರು ಪೂರ್ಣಮನಸ್ಸಿನಿಂದ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ. ಪೂಜ್ಯ ಖಾವಂದರರನ್ನು ಭೇಟಿಯಾದ ಅಭಿನಂದನಾ ಸಮಿತಿಯ ನಿಯೋಗದಲ್ಲಿ ಅಶೋಕ್ ಭಟ್ ಉಜಿರೆ, ಭುಜಬಲಿ ಧರ್ಮಸ್ಥಳ, ಡಾ. ಭಾಸ್ಕರ ಹೆಗಡೆ, ಡಾ. ಶ್ರೀನಾಥ್ ಎಂ.ಪಿ., ಜಯಶಂಕರ ಶರ್ಮ, ಪ್ರಶಾಂತ್ ಬಳಂಜ, ಲಕ್ಷ್ಮೀ ಮಚ್ಚಿನ ಉಪಸ್ಥಿತರಿದ್ದರು.