December 5, 2025
shake

ವೇಣೂರು, 5: ಯಾವುದೇ ಕಾರ್ಯಕ್ರಮವಿರಲಿ ವಸ್ತು ರೂಪದ, ಕಾಯಕದ ಸಹಕಾರ ಬೇಡುವ ಕಾಲವೊಂದಿತ್ತು. ಆದರೆ ಬರಬರುತ್ತಾ ಮನುಷ್ಯ ಸ್ವಾವಲಂಬಿಯಾಗಿದ್ದಾನೆ. ತಾನೇ ತಯಾರು ಮಾಡಿ ಇನ್ನೊಬ್ಬರ ಸಹಾಯವನ್ನು ಕಡಿಮೆ ಅಪೇಕ್ಷಿಸಿದಂತೆ ವಸ್ತು ಮತ್ತು ಕಾಯಕ ರೂಪದ ಸಹಕಾರಗಳು ವಿರಳವಾದವು. ಆಗ ಪ್ರಾರಂಭವಾದದ್ದೇ ಈ ಕವರ್ ಎನ್ನುವ ಧನರೂಪದ ಉಡುಗೋರೆ!


ಕವರಿನ ಒಳಗಡೆ ನೂರು ರೂಪಾಯಿಯಾದರೂ ಸರಿ ಐನೂರು ರೂಪಾಯಿಯಾದರೂ ಸರಿ ಕೊಡುವವನ ಶಕ್ತಿಯನುಸಾರ ಮುಜುಗರವಿಲ್ಲದೆ ಕೊಡಬಹುದು. ಹಾಗೂ ಇನ್ನೊಬ್ಬರಿಗೆ ಅದರೊಳಗಿನ ಮೊತ್ತ ಗೊತ್ತಾಗದ ಕಾರಣ ಉಡುಗೋರೆಯ ಗಾತ್ರದಿಂದ ಪ್ರತಿಷ್ಠೆಯನ್ನು ಅಳೆದು ಉಪಚರಿಸುವ ಸಂಪ್ರದಾಯ ಇತಿಶ್ರೀ ಹೇಳಬಹುದಾದಂತಹ ಈ ಸಂಪ್ರದಾಯವನ್ನು ಎಲ್ಲಾ ವರ್ಗದ ಜನ ಒಪ್ಪಿಕೊಂಡರು. ಈಗ ಅದು ಅದು ಎಷ್ಟರ ಮಟ್ಟಿಗೆ ಸರ್ವವ್ಯಾಪಿಯಾಯಿತೆಂದರೆ ಮದುವೆ ಮತ್ತು ಕವರ್ ಎನ್ನುವ ಪದಗಳು ಒಂದಕ್ಕೊಂದು ಅಪ್ಪಿಕೊಂಡಂತೆ ಇವೆ. ಮದುವೆಗೆ ಉಡುಗೋರೆ ಕೊಡುವುದು ಎನ್ನುವುದಕ್ಕಿಂತಲೂ ಮದುವೆಗೆ ಕವರ್ ಕೊಡುವುದು ಎನ್ನುವುದೇ ಹೆಚ್ಚು ಪ್ರಚಲಿತವಾಗಿದೆ. ಅದೇನೇ ಇರಲಿ ಉಡುಗೋರೆ ರೂಪದಲ್ಲಿ ನೀಡುವ ಹಣದೊಂದಿಗೆ ರೂ. 1 ಹೆಚ್ಚುವರಿ ನೀಡುವ ಪದ್ದತಿ ಯಾಕೆ ಬಂತು ಅನ್ನುವುದನ್ನು ರೂರಲ್‌ನ್ಯೂಸ್ ಎಕ್ಸ್‌ಪ್ರೆಸ್ ಬಿಚ್ಚಿಟ್ಟಿದೆ. ಮುಂದೆ ಓದಿ….

ಉಡುಗೋರೆ ಹಣದೊಂದಿಗೆ ರೂ. ಒಂದು ಸೇರಿಸಿ 101, 501, 1001 ಹೀಗೆ ಕೊಡುವ ವಾಡಿಕೆ ಇದೆ. ಯಾಕೆಂದು ಕೇಳಿದರೆ ಹೆಚ್ಚಿನವರಿಗೆ ಗೊತ್ತಿಲ್ಲ ಅನ್ನುವುದೇ ಉತ್ತರ. ಬೇರೆಯವರು ಕೊಡುತ್ತಾರೆನ್ನುವ ವಿಚಾರಷ್ಟೇ ಒಂದು ರೂ. ಸೇರಿಸಿ ಕೊಡುವವರಿದ್ದಾರೆ. ಆದರೆ ಹೆಚ್ಚುವರಿ ರೂ. 1 ನೀಡುವುದೇಕೆ ಗೊತ್ತಾ..? ಮುಂದೆ ಓದಿ……

1 ಅಂಕೆ ಆರಂಭದ ಸೂಚಕ
ಏಕೆಂದರೆ 50, 100, , 1000 ಈ ರೀತಿಯ ಸಂಖ್ಯೆಗಳನ್ನು ಇತರ ಅಂಕೆಗಳಿಂದ ವಿಭಜಿಸಬಹುದು. ಆದರೆ, 51, 101 501, ಈ ರೀತಿಯ ಸಂಖ್ಯೆಗಳನ್ನು ಬಾಗಿಸಲಾಗುವುದಿಲ್ಲ. ನಮ್ಮ ಸಂಬಂಧ ವಿಭಜಿಸಲ್ಪಡದೇ ಇರಲಿ ಎಂದು ಉದ್ದೇಶ ಮತ್ತು ತಾತ್ಪರ್ಯ. ಹಾಗೆಯೇ 100, 500ರ ಕೊನೆಯ ಅಂಕೆ ಶೂನ್ಯವಾಗಿದ್ದು, ಇದು ಮುಕ್ತಾಯದ ಸೂಚಕ. ಇದಕ್ಕೆ 1 ಸೇರಿಸಿದರೆ ಅದು 101, 501 ಆಗುತ್ತದೆ. ಕೊನೆಯಲ್ಲಿರುವ 1 ಅಂಕೆ ಆರಂಭದ ಸೂಚಕ. ಸಂಬಂಧ ಕೊನೆಯಾಗದಿರಲಿ ಎಂಬುದೇ ಇದರ ಮೂಲ ತಾತ್ಪರ್ಯ ಎನ್ನಲಾಗುತ್ತಿದೆ.

About The Author

Leave a Reply

Your email address will not be published. Required fields are marked *

You cannot copy content of this page.