ನಾರಾವಿ, ಎ. 21: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಹರೀಶ್ ಪೂಂಜ ಅವರು ಚುನಾವಣಾ ಪ್ರಚಾರದ ಅಂಗವಾಗಿ ಎ.22 ರಂದು ನಾರಾವಿ ಮಹಾಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ಪ್ರಚಾರವನ್ನು ಕೈಗೊಳ್ಳಲಿದ್ದಾರೆ.
ಬೆಳಿಗ್ಗೆ 7 ಗಂಟೆಗೆ ವೇಣೂರು, 8 ಗಂಟೆಗೆ ಬಜಿರೆ, 9 ಗಂಟೆಗೆ ಗುಂಡೂರಿ, 10 ಗಂಟೆಗೆ ಆರಂಬೋಡಿ, 11 ಗಂಟೆಗೆ ಹೊಸಂಗಡಿ, ಮಧ್ಯಾಹ್ನ 12 ಗಂಟೆಗೆ ಬಡಕೋಡಿ, 1 ಗಂಟೆಗೆ ಕಾಶಿಪಟ್ಣ, 3 ಗಂಟೆಗೆ ಪೇರಾಡಿ, 4 ಗಂಟೆಗೆ ನಾರಾವಿ, 5 ಗಂಟೆಗೆ ಕುತ್ಲೂರು, 6 ಗಂಟೆಗೆ ಕೊಕ್ರಾಡಿ, 7 ಗಂಟೆಗೆ ಸಾವ್ಯ, 8 ಗಂಟೆಗೆ ಅಂಡಿಂಜೆಗೆ ಭೇಟಿ ನೀಡಿ ಮತದಾರರನ್ನು ಬೇಟಿ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್, ಗಣೇಶ್ ಗೌಡ ಉಪಸ್ಥಿತರಿರುವರು ಎಂದು ಬಿಜೆಪಿ ಮಾಧ್ಯಮ ಸಂಚಾಲಕ ರಾಜೇಶ್ ಪೆಂರ್ಬುಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.