ಪಡಂಗಡಿ, ಎ. 18: ನನಗೆ ಮುಸ್ಲಿಂ ಮತಗಳ ಅಗತ್ಯವಿಲ್ಲ ಎಂದು ಶಾಸಕ ಹರೀಶ್ ಅವರು ಹೇಳಿಕೆ ನೀಡಿದ್ದಾರೆ ಎನ್ನಲಾದ ವೀಡಿಯೋಗಳು ಭಾರೀ ವೈರಲ್ ಆಗಿತ್ತು. ಇದೀಗ ಅದಕ್ಕೆ ಪಡಂಗಡಿ ಗ್ರಾ.ಪಂ. ಸದಸ್ಯರಾದ ಅಹ್ಮದ್ ಬಾವ ಸ್ಪಷ್ಟನೆ ನೀಡಿದ್ದು, ಶಾಸಕರು ದೇಶವಿರೋಧಿ ಮುಸ್ಲಿಂರವರ ಮತಬೇಡ ದೇಶಪ್ರೇಮಿ ಮುಸ್ಲಿಂರ ಮತವಷ್ಟೇ ಸಾಕು ಎಂದಿರುವುದನ್ನು ಯಾರೋ ತಪ್ಪು ಸಂದೇಶ ನೀಡಿ ಭಾರೀ ವೈರಲ್ ಮಾಡಿದ್ದಾರೆ. ಇಂದು ಅವರ ಮನೆಗೆ ಬೆಳಿಗ್ಗೆ ಎಷ್ಟು ಬುರ್ಖಾದ ಮಹಿಳೆಯರು, ಮುಸ್ಲಿಮರು ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಎಷ್ಟು ಮಸೀದಿ, ದರ್ಗಾದವರು ಭೇಟಿ ಕೊಡುತ್ತಾರೆ ಅನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದಿದ್ದಾರೆ.
ತಾಲೂಕಿನಲ್ಲಿ ಮುಸ್ಲಿಮರು ತಲೆಎತ್ತಿ ನಡೆಯುವಂತಿರಲಿಲ್ಲ. ಪ್ರತಿಯೊಂದು ವಿಚಾರದಲ್ಲೂ ದಬ್ಬಾಳಿಕೆ ನಡೆಯುತ್ತಿತ್ತು. ಕಳೆದ 5 ವರ್ಷದಲ್ಲಿ ಯಾರಿಗಾದರೂ ಮುಸ್ಲಿಮರಗೆ ದಬ್ಬಾಳಿಕೆ ಆಗಿದ್ದರೆ ಹೇಳಿ. ಎಲ್ಲರನ್ನು ಗೌರವದಿಂದ ಕಾಣುವ ಅವರ ಮೇಲೆ ಅಪಪ್ರಚಾರ ಸರಿಯಲ್ಲ ಎಂದಿದ್ದಾರೆ.