

ಬೆಳ್ತಂಗಡಿ, ಮೇ 13: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು ಭರ್ಜರಿ ಜಯಗಳಿಸಿ ಎರಡನೇ ಭಾರಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ.

ಮಂಗಳೂರಿನ ಸುರತ್ಕಲ್ ಎನ್‌ಐಟಿಕೆ ಯಲ್ಲಿ ಮತ ಎಣಿಕೆ ನಡೆದು, ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಂಡಿದೆ. ಪ್ರಥಮ ಸುತ್ತಿನಿಂದಲೂ ಕೊನೆಯ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ಹರೀಶ್ ಪೂಂಜರು 101004 ಮತಗಳನ್ನು ಗಳಿಸಿ ವಿಜಯ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ರಕ್ಷಿತ್ ಶಿವರಾಂ 82788 ಮತಗಳನ್ನು ಗಳಿಸಿಕೊಂಡಿದ್ದು, 18216 ಮತಗಳ ಅಂತರದಿಂದ ಹರೀಶ್ ಪೂಂಜರವರು ವಿಜಯ ಸಾಧಿಸಿದ್ದಾರೆ. ತಾಲೂಕಿನಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮ ಆಚರಿಸುತ್ತಿದ್ದಾರೆ.