March 11, 2025
tt

ಬಹುತೇಕ ಒಂದೇ ವಯಸ್ಸಿನವರು, ಇಬ್ಬರೂ ಹೈಕೋರ್ಟ್ ವಕೀಲರು!
ಕಳೆದ ಮೂರು ಚುನಾವಣೆಯಲ್ಲಿ ಎರಡು ಬಾರಿ ಕಾಂಗ್ರೆಸ್, ಕಳೆದ ಬಾರಿ ಬಿಜೆಪಿ ಜಯಬೇರಿ ಬಾರಿಸಿದೆ. ಕಾಂಗ್ರೆಸ್‌ನಿಂದ ರಕ್ಷಿತ್ ಶಿವರಾಂಗೆ ಬಿಜೆಪಿಯಿಂದ ಮತ್ತೆ ಹರೀಶ್ ಪೂಂಜಾರಿಗೆ ಸೀಟು ಘೋಷಣೆಯಾಗಿದ್ದು, ಇಬ್ಬರೂ ಪ್ರಚಾರದ ಫೀಲ್ಡ್‌ಗೆ ಇಳಿದಿದ್ದಾರೆ.
ಹರೀಶ್ ಪೂಂಜಾ ಮತ್ತು ರಕ್ಷಿತ್ ಶಿವರಾಂ ಬಹುತೇಕ ಹೆಚ್ಚುಕಮ್ಮಿ ಒಂದೇ ವಯಸ್ಸಿನವರು ಮತ್ತು ಇಬ್ಬರೂ ಹೈಕೋರ್ಟ್ ವಕೀಲರು. ಇಬ್ಬರೂ ಕೊರೊನಾ ವೇಳೆ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡವರು. ಈಗಾಗಿ ಮತದಾರರ ಒಲವು ಯಾವಕಡೆ ಇದೆ ಎನ್ನುವುದನ್ನು ಈಗಲೇ ನಿರ್ಧರಿಸುವುದು ಕಷ್ಟ.
ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಕಮಲ ಜಯಭೇರಿ ಬಾರಿಸಿತ್ತು. ಬಿಜೆಪಿಯ ಯುವ ಮುಖಂಡ ಹರೀಶ್ ಪೂಂಜ ಅವರು ಕಾಂಗ್ರೆಸ್ಸಿನ ಹಿರಿಯ ಮುಖಂಡ ವಸಂತ ಬಂಗೇರ ಅವರನ್ನು ೨೨,೯೭೪ ಮತಗಳ ಅಂತರದಿಂದ ಸೋಲಿಸಿದ್ದರು. ಅಲ್ಲಿಂದ ಹರೀಶ್ ಪೂಂಜ ಕ್ಷೇತ್ರದಲ್ಲಿ ಹಿಡಿತವನ್ನು ಸಾಧಿಸುತ್ತಾ ಬಂದಿದ್ದು, ಕೊರೊನಾ ಮತ್ತು ಅತಿವೃಷ್ಟಿಯ ವೇಳೆ ಅವರು ಕ್ಷೇತ್ರದಲ್ಲಿ ಮಾಡಿದ ಕೆಲಸಕಾರ್ಯಗಳು ಜನಮೆಚ್ಚುಗೆಯನ್ನು ಪಡೆದಿದೆ.
ಕ್ಶೇತ್ರದಲ್ಲಿ ಬಿಲ್ಲವ-ಬಂಟ್ಸ್ ನಡುವೆ ಹೆಚ್ಚಿನ ಪೈಪೋಟಿ. ಇತ್ತೀಚಿನ ಕಾಂಗ್ರೆಸ್ಸಿನ ಪ್ರಜಾಧ್ವನಿ ಯಾತ್ರೆಗಳಲ್ಲಿ ಸಿಕ್ಕ ಪ್ರತಿಕ್ರಿಯೆಯಿಂದ ಸ್ಥಳೀಯ ಕಾಂಗ್ರೆಸ್ ಮುಖಂಡರು ಖುಷಿಯಾಗಿದ್ದಾರೆ. ಆದರೆ ಅದು ಮತವಾಗಿ ಪರಿವರ್ತನೆಯಾಗುತ್ತದೆ ಎನ್ನುವ ಖಾತ್ರಿ ಜಿಲ್ಲಾ ಮುಖಂಡರಿಗಿಲ್ಲ.
ಚಾರ್ಮಾಡಿಯಿಂದ ಪೂಂಜಾಲಕಟ್ಟೆಯವರೆಗೂ, ಹೊಸಂಗಡಿಯಿಂದ ಉಪ್ಪಿನಂಗಡಿಯವರೆಗೂ ಸುತ್ತುವರಿದಿರುವ ೮೧ ಗ್ರಾಮಗಳನ್ನು ಹೊಂದಿರುವ ವಿಸ್ತಾರವಾದ ಕ್ಷೇತ್ರ ಇದು. ಬೆಳ್ತಂಗಡಿ ಕ್ಷೇತ್ರದ ಚುನಾವಣಾ ಇತಿಹಾಸವನ್ನು ನೋಡುವುದಾದರೆ ಇಲ್ಲಿ ಬಹುತೇಕ ಬಂಗೇರ ಸಹೋದರರದ್ದೇ ರಾಜ್ಯಭಾರ. ಬೆಳ್ತಂಗಡಿಯಲ್ಲಿ ನಡೆದ ಹದಿನಾಲ್ಕು ಚುನಾವಣೆಗಳಲ್ಲಿ ಏಳು ಬಾರಿ ಬಂಗೇರ ಮನೆತನದವರದ್ದೇ ಆಯೆಯಾಗಿದ್ದಾರೆ.
ಎಸ್‌ಡಿಪಿಐ ತಮ್ಮ ಅಭ್ಯರ್ಥಿಯಾಗಿ ಅಕ್ಬರ್ ಬೆಳ್ತಂಗಡಿ ಹಾಗೂ ಸರ್ವೋದಯ ಪಕ್ಷದ ಅಭ್ಯರ್ಥಿಯಾಗಿ ಆದಿತ್ಯ ಕೊಲ್ಲಾಜೆ ಯವರನ್ನು ಈಗಾಗಲೇ ಘೋಷಿಸಿದೆ. ಈ ಪಕ್ಷದ ಸ್ಪರ್ಧೆಯಿಂದ ಕಾಂಗ್ರೆಸ್ ಮತಬ್ಯಾಂಕಿಗೆ ಹಿನ್ನಡೆಯಾಗುತ್ತದೋ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ೨೦೧೮ರ ಅಂಕಿಅಂಶದ ಪ್ರಕಾರ, ಕ್ಷೇತ್ರದ ಮತದಾರ ಸಂಖ್ಯೆ ಹೀಗಿದೆ ಪುರುಷರು : ೧,೦೯,೪೨೮ ಮಹಿಳೆಯರು: ೧೦೯೫೦೬ ಇತರರು : ೦೧ ಒಟ್ಟು: ೨,೧೮,೯೩೫.

About The Author

Leave a Reply

Your email address will not be published. Required fields are marked *

You cannot copy content of this page.