ಆರಂಬೋಡಿ, ಎ. 6: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರವಾಗಿ ಬಿರ್ವೆರ್ ಕುಡ್ಲ ಸಂಘಟನೆಯ ಸಂಸ್ಥಾಪಕ, ಚಿತ್ರನಟ ಉದಯ ಪೂಜಾರಿ ಬಳ್ಳಾಲ್‌ಬಾಗ್ ಅವರು ಆರಂಬೋಡಿ ಬೂತ್‌ಗಳಲ್ಲಿ ಮತಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ವಾಗ್ಮಿ ಸಹನಾ ಕುಂದರ್ ಸೂಡ, ಹರೀಶ್ ಪೂಂಜರವರ ಪತ್ನಿ ಡಾ. ಸ್ವೀಕೃತಾ ಪೂಂಜ, ಆರಂಬೋಡಿ ಗ್ರಾ.ಪಂ. ಅಧ್ಯಕ್ಷೆ ವಿಜಯ ರಮೇಶ್, ಬಿಜೆಪಿಯ ಪ್ರಮುಖರಾದ ರಾಜೇಶ್ ಮೂಡುಕೋಡಿ, ಕಿರಣ್ ಮಂಜಿಲ, ಸೋಮನಾಥ ಬಂಗೇರ, ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭಾಕರ ಹುಲಿಮೇರು, ಸತೀಶ್ ಆರಂಬೋಡಿ, ಸುರೇಂದ್ರ ಹಚ್ಚಾಡಿ, ನಿತೀಶ್ ಗುಂಡೂರಿ, ರಾಜೇಶ್ ಆರಂಬೋಡಿ, ಆಶಾ ಎಸ್. ಶೆಟ್ಟಿ, ವಿನಿತ್ ಕೋಟ್ಯಾನ್ ಸಾವ್ಯ, ಪೃಥ್ವಿ ಬಂಗೇರ, ಉದಯ ನಾವೂರು, ಬಿಜೆಪಿ ಕಾರ್ಯಕರ್ತರು, ಶಕ್ತಿಕೇಂದ್ರದ ಪ್ರಮುಖರು ಇದ್ದರು.