ಬೆಳಗಾವಿ: ಸತೀಶ್ ಜಾರಕಿಹೋಳಿ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಹಿಂದೂ ಸಮಾಜವನ್ನು ಅಶ್ಲೀಲ ಎಂದು ಹೇಳಿದ್ದ ಸತೀಶ್ ಜಾರಕಿಹೊಳಿಗೆ ಧಮ್ ಇದ್ದರೆ ಚುನಾವಣೆಗೆ ಹಿಂದೂ ಮತಗಳು ಬೇಡ ಅಂತಾ ಅವರು ಹೇಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಯಮಕನಮರಡಿ ಮತಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎಂದರು.ಯಾವ ಹಿಂದೂ ಸಮಾಜವನ್ನು ಅಶ್ಲೀಲ ಸಮಾಜ ಅಂತ ಹೇಳಿದ್ದಾರೆಯೋ, ಅವರು ತಾಕತ್ತಿದ್ದರೆ ಹಿಂದೂ ಮತಗಳು ಬೇಡ ಅಂತ ಹೇಳಲಿ ಎಂದು ಸವಾಲ್ ಹಾಕಿದ್ದಾರೆ.