ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ವತಿಯಿಂದ ವಿಜಯ ದಿವಸ್ ಕಾರ್ಯಕ್ರಮ ದ ಅಂಗವಾಗಿ ನಗರದ ಎಪೌಂರಿಯಂ ಕಾಂಪ್ಲೆಕ್ಸ್ ನ ಸಭಾಂಗಣ ದಲ್ಲಿ ದೇಶದ ಮಾಜಿ ಯೋಧರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.ಅವರು ದೇಶದ ಸೈನಿಕರ ಸೇವೆ ಮತ್ತು ಯುವಕ ಯುವತಿಯರಿಗೆ ಅಗ್ನಿಪಥ್ ನ ಬಗ್ಗೆ ವಿಶೇಷ ಮಾಹಿತಿ ಯನ್ನು ನೀಡಿದರು . ನಿವೃತ ಯೋಧರಾದ ಸುಧಾಕರ್ ಕುಲಾಲ್ ಕುಂಪಲ ಇವರು ಕೇಸರಿ ಮಿತ್ರ ವೃಂದ ಹಾಗೂ ಸಂಘ ಶಿಕ್ಷಣ . ಸಮಾಜ ಸೇವೆ ಯಲ್ಲಿ ತೊಡಗಿಸಿ. ಇದೀಗ ಶಾರದ ಆಯುರ್ವೇದ ಕಾಲೇಜು ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಸುಧೀನ್ ಬೇಕಲ್ ಟಿ ಅವರು ಕುಂಪಲ ದಲ್ಲಿ ದ್ದು ಸಾಮಾಜಿಕ ವಾಗಿ ತನ್ನನ್ನು ತೊಡಗಿಸಿ ಕೊಂಡಿದ್ದಾರೆ.
ಕಾರ್ಯಕ್ರಮ ದಲ್ಲಿ.ಲಯನ್ಸ್ ಕ್ಲಬ್ ಅಧ್ಯಕ್ಷ ರಾದ ಲಯನ್ ಅನಿಲ್ ದಾಸ್ ಮಾತಾಡಿ ದೇಶದ ಭದ್ರತೆ ಸುರಕ್ಷತೆ ರಕ್ಷಣೆ ಗೆ ಬಲಿದಾನ ಗೈದ ಹಾಗು ಗಡಿ ಕಾಯುವ ವೀರ ಸೈನಿಕರ ಸ್ಮರಣೆ ಮಾಡಿದರು.ಕಾರ್ಯದರ್ಶಿ ಮಲ್ಲಿಕಾ ಆಳ್ವಾ. ರಾಮಮೋಹನ್ ಆಳ್ವಾ. ಹರೀಶ್ ಎಂ ಶೆಟ್ಟಿ.ಭಾರತಿ ವಿನೋದ್. ತರನಾಥ್ ಬೋಳಾರ್.ರತೀಶ್ .ಎನ್ ಟಿ. ರಾಜ. ಆಶಾ ಲತಾ. ಮಹೇಶ್ ಕುಮಾರ್..ಮಹೇಶ್ ಶೆಟ್ಟಿ..ದಿನೇಶ್ ಪುತ್ತೂರು ಮುಂತಾದವರು ಉಪಸ್ಥಿತರಿದ್ದರು.