ನವದೆಹಲಿ: ದೇಶಾದ್ಯಂತ ಭಯೋತ್ಪಾದನಾ ಚಟುವಟಿಕೆಗಳಿಗೆ ಯುವಕರನ್ನು ನೇಮಿಸಿ ತರಬೇತಿ ನೀಡಿದ ಜೈಶ್-ಎ-ಮೊಹಮ್ಮದ್ (JeM)ನ ಐವರು ಭಯೋತ್ಪಾದಕರಿಗೆ ದೆಹಲಿ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ವಿಶೇಷ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅವರು ತೀರ್ಪು ನೀಡಿದ್ದು, ಜೆಇಎಂನ ಸಜ್ಜದ್ ಅಹ್ಮದ್ ಖಾನ್, ಬಿಲಾಲ್ ಅಹ್ಮದ್ ಮಿರ್, ಮುಜಾಫರ್ ಅಹ್ಮದ್ ಭಟ್, ಇಶ್ಪಾಕ್ ಅಹ್ಮದ್ ಭಟ್ ಮತ್ತು ಮೆಹರಾಜ್–ಉದ್–ದಿನ್ ಚೋಪಾನ್ ಶಿಕ್ಷೆಗೆ ಗುರಿಯಾದವರಾಗಿದ್ದಾರೆ. ಈ ಪ್ರಕರಣದ ಇನ್ನೊಬ್ಬ ಅಪರಾಧಿ ತನ್ವೀರ್ ಅಹ್ಮದ್‌ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.