ಉಡುಪಿ: ಮಲ್ಪೆ ಮೀನುಗಾರರ ಬಲೆಗೆ ಬಿದ್ದ 23 ಕಿಲೋ ತೂಕದ ಅಪರೂಪದ ಮೀನು!

ಮಲ್ಪೆ: ಮಲ್ಪೆ ಆಳಸಮುದ್ರ ಮೀನುಗಾರರ ಬಲೆಗೆ ಸುಮಾರು 23 ಕಿಲೋ ತೂಕದ ಮೀನೊಂದು ಬಿದಿದ್ದು, ಇದು ಬರೋಬರಿ 2.44 ಲಕ್ಷ ರೂ.ಗಳಿಗೆ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.

ಈ ಮೀನನ್ನು ಸ್ಥಳೀಯವಾಗಿ ಗೋಲಿ ಮೀನು ಎಂದು ಕರೆಯಲಾಗುವ ಇದರ ವೈಜ್ಞಾನಿಕ ಹೆಸರು ಘೋಲ್‌ ಫಿಶ್‌. ಇದು ಮಹಾರಾಷ್ಟ್ರ ಮತ್ತು ಗುಜರಾತ್‌ ಸಮುದ್ರದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಮಲ್ಪೆಯ ಮೀನುಗಾರರ ಬಲೆಗೆ ಈ ಮೀನು ಹಲವು ಬಾರಿ ಬಿದ್ದಿದೆಯಾದರೂ ಇಷ್ಟು ದೊಡ್ಡ ಮೀನು ಸಿಕ್ಕಿರುವುದು ಪ್ರಥಮ. ಇದು ಕೆಜಿಗೆ 10,640 ರೂ.ಗಳಂತೆ ಮಾರಾಟವಾಗಿದೆ.

ಇನ್ನು ಈ ಮೀನಿನ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ವಿಶ್ವನಿದ್ಯಾನಿಲಯದ ಕಡಲಜೀವಿ ಶಾಸ್ತ್ರ ವಿಭಾಗದ ಸಂಶೋಧಕ ಶಿವಕುಮಾರ್‌ ಹರಗಿ ಅವರು, ಔಷಧೀಯ ಗುಣ ಹೊಂದಿರುವ ಈ ಮೀನಿನ ಹೊಟ್ಟೆಯನ್ನು ಬಂಗಾರವೆಂದೇ ಪರಿಗಣಿಸಲಾಗಿದೆ. ವಿದೇಶದಲ್ಲಿ ಇದಕ್ಕೆ ಭಾರೀ ಬೇಡಿಕೆ ಇದೆ. ಸೌಂದರ್ಯ ವರ್ಧಕ ವಸ್ತುಗಳಲ್ಲಿ ಉಪಯೋಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Check Also

ಉಡುಪಿ: ಆಕಸ್ಮಿಕವಾಗಿ ಕೆರೆಗೆ ಜಾರಿ ಬಿದ್ದು ಅಣ್ಣ- ತಂಗಿ ಸಾವು..!

ಕುಂದಾಪುರ: ಆಕಸ್ಮಿಕವಾಗಿ ಕೆರೆಯ ನೀರಿಗೆ ಜಾರಿ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮ ಪಂಚಾಯತ್ …

Leave a Reply

Your email address will not be published. Required fields are marked *

You cannot copy content of this page.