ದಕ್ಷಿಣಕನ್ನಡ : ಜಲೀಲ್ ಕೊಲೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ʻಹಿಂದೂ ಮಹಿಳೆ ಜೊತೆ ಅನೈತಿಕ ಸಂಬಂಧವೇ ಕೊಲೆಗೆ ಪ್ರಮುಖ ಕಾರಣʼ ಎಂಬ ಮಾಹಿತಿ ಹೊರ ಬಂದಿದ್ದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.
ಡಿಸೆಂಬರ್ 24ರಂದು ಮಂಗಳೂರಿನ ಸುರತ್ಕಲ್ ನ ಕಾಟಿಪಳ್ಳದಲ್ಲಿ ಜಲೀಲ್ ಎಂಬ ವ್ಯಾಪಾರಿಯನ್ನು ಚೂರಿ ಇರಿದು ಕೊಲೆಗೈದ ಘಟನೆ ಸಂಬಂಧಿಸಿ, ಈಗಾಗಲೆ ಮಹಿಳೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿತ್ತು. ಈ ಕೊಲೆ ಬಗ್ಗೆ ಬೆಳಗಾವಿ ಅಧಿವೇಶನದಲ್ಲೂ ಮಹತ್ವದ ಚರ್ಚೆ ನಡೆಸಿದೆ.
ಜಲೀಲ್ ಮತ್ತು ಸ್ಥಳೀಯ ಹಿಂದೂ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದನು. ಈ ಬಗ್ಗೆ ಸ್ಥಳೀಯರ ಜನರಿಗೆ ತಿಳಿದಿದೆ, ಈ ಬಗ್ಗೆ ಎರಡು ವರ್ಷಗಳ ಹಿಂದೆಯೂ ಸ್ಥಳೀಯವಾಗಿ ಗಲಾಟೆ ನಡೆದಿತ್ತು. ಅಲ್ಲದೇ ಜಲೀಲ್ ಇನ್ಮುಂದೆ ಇಂತಹ ಕೆಟ್ಟ ಸಂಬಂಧವನ್ನು ಹೊಂದಬೇಡ ಎಂದು ಎಚ್ಚರಿಕೆ ಸಹ ಕೊಡಲಾಗಿತ್ತು.
ಚೂರಿ ಇರಿದ ಕೊಲೆ ಆರೋಪಿಗಳಾದ ಶೈಲೇಶ್ ಹಾಗೂ ಸುವಿನ್ ಕಾಂಚನ್ ಹಾಗೂ ಅನೈತಿಕ ಸಂಬಂಧವಿದ್ದ ಮಹಿಳೆಗೂ ಯಾವ ಸಂಬಂಧವಿಲ್ಲ. ಆದ್ರೆ, ಅನ್ಯಧರ್ಮೀಯ ವ್ಯಕ್ತಿ ಎನ್ನುವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಇದರ ಜತೆಗೆ ಇದೀಗ ಹಿಂದೂ ಮಹಿಳೆ ಜೊತೆ ಅನೈತಿಕ ಸಂಬಂಧವೇ ಕಾರಣವಲ್ಲ ಎಂದು ಮುಸ್ಲಿಂ ಸಮುದಾಯದಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಪೊಲೀಸರ ತನಿಖೆಯ ಬಳಿ ಸತ್ಯಾಂಶ ಹೊರ ಬರಲಿದೆ.