

ಉಳ್ಳಾಲ : ಕುಲಾಲ ಯುವ ವೇದಿಕೆ ಉಳ್ಳಾಲ ವಿಧಾನ ಸಭಾಕ್ಷೇತ್ರ ಕುಲಾಲ ಯುವ ವೇದಿಕೆ ಉಳ್ಳಾಲ ವಲಯ ನೂತನ ತಂಡದ ರಚನೆ ನಿನ್ನೆ ಕೊಲ್ಯ ಕುಲಾಲ ಸಮುದಾಯ ಭವನ ಕೊಲ್ಯ ದಲ್ಲಿ ಚಾಲನೆಗೊಂಡಿತ್ತು.
ನೂತನ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಕೊಲ್ಯ ಕುಲಾಲ ಸಂಘ ಅಧ್ಯಕ್ಷ ಭಾಸ್ಕರ್ ಕುತ್ತಾರ್, ಹಿರಿಯರಾದ ಹೊನ್ನಯ ಕುಲಾಲ್, ಅಶೋಕ್ ಕುಳೂರ್ , ಹೇಮಚಂದ್ರ ಕೈರಂಗಳ, ಹರ್ಷ ಮುಡಿಪು, ಪ್ರವೀಣ್ ಕುಲಾಲ್ ಮುಡಿಪು, ಪ್ರವೀಣ್ ಕೊಲ್ಯ, ನಾರಾಯಣ ತಲಪಾಡಿ, ರಂಜಿತ್ ಉಚ್ಚಿಲ್.ಪ್ರಕಾಶ್ ಪಿಲಿಕೂರ್, ಜಯ ಪ್ರಕಾಶ್ ಜೆಪ್ಪು, ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.
ಲಯನ್ ಅನಿಲ್ ದಾಸ್ ಮಾತನಾಡುತ್ತಾ ಯುವ ವೇದಿಕೆ ಯನ್ನು ಬಲಿಷ್ಠ ವಾಗಿ ಜಿಲ್ಲೆಯಾದ್ಯಂತ ಸಂಘಟನೆ ಮಾಡುವ ಮೂಲಕ ಜಾಗೃತಿ ಗೊಳಿಸುವ ಅನಿವಾರ್ಯತೆಯನ್ನು ಒತ್ತಿ ಹೇಳಿದರು. ಜಯಂತ್ ಸಂಕೋಳಿಗೆ ಕಾರ್ಯಕ್ರಮ ನಿರೂಪಿಸಿದರು.