October 23, 2024
aadhaar-card_650x400_51524330817

ಇಂದಿನ ಕಾಲದಲ್ಲಿ, ಆಧಾರ್ ಕಾರ್ಡ್ ನಮಗೆಲ್ಲರಿಗೂ ಬಹಳ ಮುಖ್ಯವಾದ ದಾಖಲೆಯಾಗಿದೆ. ಈ ಕಾರ್ಡ್ ಇಲ್ಲದೆ ನಾವು ನಮ್ಮ ಮನೆಯಿಂದ ಬ್ಯಾಂಕಿನವರೆಗೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಇಂದಿನ ದಿನಗಳಲ್ಲಿ ಎಲ್ಲ ಕೆಲಸಗಳಿಗೂ ಆಧಾರ್ ಅಗತ್ಯವಾಗಿದೆ. ಈ ಮಧ್ಯೆ ಆಧಾರ್‌ಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಆಧಾರ್ ಮೂಲಕ ಇ-ಕೆವೈಸಿ ಸ್ಥಿರ ಬೆಳವಣಿಗೆಯನ್ನು ಕಾಣುತ್ತಿದೆ.

ಆಧಾರ್​ ಇ-ಕೆವೈಸಿಯಲ್ಲಿ ವೇಗ

ಆರ್ಥಿಕ ವರ್ಷ 2022-23 ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 84.8 ಕೋಟಿಗೂ ಹೆಚ್ಚು ಇ-ಕೆವೈಸಿ ವಹಿವಾಟುಗಳನ್ನು ಆಧಾರ್ ಬಳಸಿಕೊಂಡು ಮಾಡಿದ್ದಾರೆ. ಇದು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕಕ್ಕೆ (ಜುಲೈ-ಸೆಪ್ಟೆಂಬರ್) ಹೋಲಿಸಿದರೆ ಶೇ.18.53ರಷ್ಟು ಹೆಚ್ಚು. ಡಿಸೆಂಬರ್‌ನಲ್ಲಿಯೇ 32.49 ಕೋಟಿ ಇ-ಕೆವೈಸಿ ವಹಿವಾಟುಗಳನ್ನು ಆಧಾರ್ ಮೂಲಕ ಮಾಡಲಾಗಿದೆ, ಇದು ಹಿಂದಿನ ತಿಂಗಳಿಗಿಂತ ಶೇ. 13 ರಷ್ಟು ಹೆಚ್ಚಾಗಿದೆ.

ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು

ಡಿಸೆಂಬರ್ 2022 ರ ಅಂತ್ಯದವರೆಗೆ ಸುಮಾರು 8,829.66 ಕೋಟಿ ಆಧಾರ್‌ ದೃಢೀಕರಣ ವಹಿವಾಟುಗಳನ್ನು ಮಾಡಲಾಗಿದೆ. ಆರ್ಥಿಕ ಸೇರ್ಪಡೆ, ಕಲ್ಯಾಣ ವಿತರಣೆ ಮತ್ತು ಇತರ ಹಲವು ಸೇವೆಗಳನ್ನು ಪಡೆಯುವಲ್ಲಿ ಆಧಾರ್ ಹೇಗೆ ಬೆಳೆಯುತ್ತಿರುವ ಪಾತ್ರವನ್ನು ವಹಿಸುತ್ತಿದೆ ಎಂಬುದನ್ನು ಈ ಮೂಲಕ ಕಾಣಬಹುದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ದೇಶದ 1,100 ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಆಧಾರ್ ಬಳಸಲು ಸೂಚನೆ ನೀಡಲಾಗಿದೆ. ಉದ್ದೇಶಿತ ಫಲಾನುಭವಿಗಳಿಗೆ ದಕ್ಷತೆ, ಪಾರದರ್ಶಕತೆ ಮತ್ತು ಕಲ್ಯಾಣ ಸೇವೆಗಳ ವಿತರಣೆಯನ್ನು ಸುಧಾರಿಸಲು ಕೇಂದ್ರ ಮತ್ತು ರಾಜ್ಯಗಳಲ್ಲಿನ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಡಿಜಿಟಲ್ ಐಡಿ ಸಹಾಯವಾಗುತ್ತಿದೆ.

 

About The Author

Leave a Reply

Your email address will not be published. Required fields are marked *

You cannot copy content of this page.