ಉಡುಪಿ: ಅಷ್ಠಮಿ ಪ್ರಯುಕ್ತ ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯ ಪ್ರದಾನ – ಇಂದು ವಿಟ್ಲಪಿಂಡಿ ಉತ್ಸವ

ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ಸೋಮವಾರ ರಾತ್ರಿ ನೈವೇದ್ಯ ಸಮರ್ಪಿಸಿಮಹಾಪೂಜೆ ನಡೆಸಿದ ಪರ್ಯಾತ ಶ್ರೀಪಾದರು ಚಂದ್ರೋದಯದ ವೇಳೆ 12.07 ಗಂಟೆಗೆ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು. ಬಳಿಕ ಭಕ್ತರಿಗೆ ಅರ್ಘ್ಯ ಬಿಡುವ ಅವಕಾಶ ಕಲ್ಪಿಸಲಾಗಿತ್ತು.ಅದಕ್ಕೂ ಮುನ್ನ ಶ್ರೀಪಾದರು ಮಧ್ವಮಂಟಪದಲ್ಲಿ ಮರದ ತೊಟ್ಟಿಲೊಳಗಿರುವ ಶ್ರೀ ಕೃಷ್ಣನ ಮಣ್ಣಿನ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಡೋಲು ಉತ್ಸವಕ್ಕೆ ಚಾಲನೆ ನೀಡಿದರು. ಶ್ರೀ ಕೃಷ್ಣಮಠವನ್ನು ಸಂಪೂರ್ಣವಾಗಿ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಕೃಷ್ಣವೇಷ ಸ್ಪರ್ಧೆ ಎಲ್ಲರ ಗಮನ ಸೆಳೆ ಯಿತು. ಶ್ರೀ ಕೃಷ್ಣಮಠದ ಹೊರಗೆ ಹಾಗೂ ರಥಬೀದಿಯ ಸುತ್ತ ವಿದ್ಯುದ್ದೀಪಾಲಂಕಾರ ಕಂಗೊಳಿಸಿತು. ಪರ್ಯಾಯ ಶ್ರೀಪಾದರು ಏಕಾದಶಿಯಂತೆ ನಿರ್ಜಲ ಉಪವಾಸದಲ್ಲಿದ್ದು, ಬೆಳಗ್ಗೆ ಮತ್ತು ರಾತ್ರಿ ಮಹಾಪೂಜೆ, ತುಳಸಿ ಅರ್ಚನೆ ನಡೆಸಿದರು. ಯತಿದ್ವಯರು ಬೆಳಗ್ಗೆ ಮಹಾಪೂಜೆ ಬಳಿಕ ರಾತ್ರಿ ನೈವೇದ್ಯಕ್ಕಾಗಿ ಉಂಡೆಗಳನ್ನು ಕಟ್ಟಿ ಮುಹೂರ್ತ ಮಾಡಿದರು.

Check Also

ಬಂಟ್ವಾಳ: ಬ್ಯಾಂಕ್ ಶಾಖೆಯೊಳಗಿಂದಲೇ ನಿವೃತ್ತ ಸೈನಿಕರೊಬ್ಬರ 1.30 ಲಕ್ಷ ಇದ್ದ ಬ್ಯಾಗ್ ಕಳವು

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನ ಬ್ಯಾಂಕ್ ಶಾಖೆಯೊಳಗಿಂದಲೇ ನಿವೃತ್ತ ಸೈನಿಕರೊಬ್ಬರ 1.30 ಲಕ್ಷ ರೂ. ನಗದು ಇದ್ದ ಬ್ಯಾಗ್‌ ಎಗರಿಸಿ ಪರಾರಿಯಾಗಿರುವ …

Leave a Reply

Your email address will not be published. Required fields are marked *

You cannot copy content of this page.