ಮಂಗಳೂರು: ಶನಿವಾರದಂದು ರಾತ್ರಿ ಕಾಟಿಪಳ್ಳದಲ್ಲಿ ಹತ್ಯೆ ಪ್ರಕರಣವಾಗಿದ್ದು, ಸುರತ್ಕಲ್ ಜಂಕ್ಷನ್‌ನಲ್ಲಿ ಪೊಲೀಸರು ಬರೆ ಹಾಕಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.
ಸುರತ್ಕಲ್ ಪೊಲೀಸರ ವಾಹನ ನಿಲುಗಡೆ, ಓಡಾಟಕ್ಕೆ ಹಾಗೂ ಭಾನುವಾರ ಜಲೀಲ್ ಅವರ ಪಾರ್ಥಿವ ಶರೀರ ಕೊಂಡೊಯ್ಯಲು ಸುರತ್ಕಲ್ ಜಂಕ್ಷನ್ ನಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಸೋಮವಾರ ಬ್ಯಾರಿಕೇಡ್ ತೆರವುಗೊಳಿಸಲಾಗಿಲ್ಲ. ಪೊಲೀಸರ ಉಪಸ್ಥಿತಿಯೂ ಇಲ್ಲ. ವಾಹನ ಸವಾರರು ಪರದಾಡುವಂತಾಗಿದೆ.
ಸುರತ್ಕಲ್ ಜಂಕ್ಷನ್ ಬಂದ್ ಮಾಡಿರುವ ಕಾರಣ ಹಾಗೂ ಸೋಮವಾರವಾಗಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಆಂಬುಲೆನ್ಸ್ ಒಂದು ಫ್ಲೈ ಓವರ್ ನಲ್ಲಿ ಬಾಕಿ ಆದ ಘಟನೆಯೂ ನಡೆದಿದೆ.
ಇನ್ನು ಬ್ಯಾರಿಕೇಡ್ ಹಾಕಿದ ಉದ್ದೇಶವಾದರೂ ಏನು ಎಂಬುದುದನ್ನು ಸಾರ್ವಜನಿಕರ ಪ್ರಶ್ನಿಸುತ್ತಿದ್ದು, ರಸ್ತೆಯ ನಡುವೆ ವಾಹನ ಪಾರ್ಕಿಂಗ್ ಮಾಡಲಾಗುತ್ತಿದೆ.