ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರ ಬರ್ಬರ ಹತ್ಯೆ-ಬೆಚ್ಚಿಬಿದ್ದ ಜನತೆ

ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ನಡೆದ ಯುವಕರಿಬ್ಬರ ಬರ್ಬರ ಹತ್ಯೆಯು ಬೆಳಗಾವಿ ಜನತೆಯನ್ನು ಬೆಚ್ಚಿಬೀಳಿಸಿದೆ. ನಗರದ ಹೊರ ವಲಯದಲ್ಲೇ ಈ ಘಟನೆ ನಡೆದಿದ್ದು, ಜನರನ್ನು ಆತಂಕಕ್ಕೆ ದೂಡಿದೆ.
ಬಸವರಾಜ್ ಬೆಳಗಾಂವ್ಕರ್ (22), ಗಿರೀಶ್​ ನಾಗಣ್ಣವರ (22) ಹತ್ಯೆಯಾದ ಯುವಕರು.

ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಯುವಕರು ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ ಆಡುತ್ತಿದ್ದರು. ಈ ವೇಳೆ ಮೈದಾನಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ವಾಹನ ನುಗ್ಗಿಸಿದ್ದ.

ಮೈದಾನದಲ್ಲಿ ವಾಹನ ನುಗ್ಗಿಸಿದಕ್ಕೆ ಯುವಕರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸಿಟ್ಟಾದ ಚಾಲಕ, ವಾಹನದಿಂದ ಕೆಳಗಿಳಿದು ಚಾಕುವಿನಿಂದ ಚುಚ್ಚಿ ಯುವಕರಿಬ್ಬರನ್ನು ಬರ್ಬರ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾಡಿ, ಎಸಿಪಿ ನಾರಾಯಣ ಭರಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕರಿಬ್ಬರ ಮೃತದೇಹಗಳನ್ನು ಬಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.

Check Also

ಬಿಜೆಪಿಯ ಉಚ್ಚಾಟನೆಗೆ ನಾನು ತಲೆಬಿಸಿ ಮಾಡಿಕೊಳ್ಳಲ್ಲ : ರಘುಪತಿ ಭಟ್

ಉಡುಪಿ: ಬಿಜೆಪಿಯಿಂದ ನನ್ನನ್ನು ಉಚ್ಛಾಟನೆ ಮಾಡಿರುವುದು ಮಾಧ್ಯಮದ ಮೂಲಕ ತಿಳಿದು ಬೇಸರವಾಯಿತು. ಶಿಸ್ತು ಸಮಿತಿಯಿಂದ ನನಗೆ ಈವರೆಗೆ ಯಾವುದೇ ನೋಟಿಸ್ …

Leave a Reply

Your email address will not be published. Required fields are marked *

You cannot copy content of this page.