

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ಮುಸ್ಲಿಂ ಸಮಾಜದ ಮಜರ್ ನಿರ್ಮಾಣ ಮಾಡಿದ್ದಾರೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಕಲಬುರಗಿಯಲ್ಲಿ ಆರೋಪ ಮಾಡಿದ್ದಾರೆ.
ಎರಡು ತಿಂಗಳ ಹಿಂದೆರಂದು ಮೋಹರಂ ಆಚರಣೆ ಸಮಿತಿಯ ಕೆಲ ಯುವಕರು ಲಾಲ್ ಸಾಹೇಬ್ ನೈಯಿಲೆ ಯಹೈದರಿ ದರ್ಗಾದ ಮಜರ್ ಕಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಮೊದಲು ಗ್ರಾಮದ ಸಂತೆ ಜಾಗದಲ್ಲಿದ್ದ ಮಜರ್ ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಗ್ರಾಮ ಪಂಚಾಯಿತಿಯವರು ಸಂತೆ ಜಾಗದಲ್ಲಿದ್ದ ದೇವಸ್ಥಾನ ಮತ್ತು ಮಜರ್ ತೆರವುಗೊಳಿಸಿದ್ದರು. ನಂತರ ಗ್ರಾಮದ ಕೆಲ ಹಿಂದು, ಮುಸ್ಲಿಂರು ಸೇರಿಕೊಂಡು ಶಾಲೆಯ ಗೇಟ್ ಬೀಗ ಮುರಿದು, ಅತಿಕ್ರಮಣ ಮಾಡಿ ಕೊಠಡಿಯಲ್ಲಿ ಮಜರ್ ಕಟ್ಟಿದ್ದರು.