ಮಂಗಳೂರು: ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಮುನ್ನ ಉಡುಪಿಯಲ್ಲಿ ರಿಂಗಣಿಸಿದ ಸ್ಯಾಟಲೈಟ್‌ ಫೋನ್‌

ಮಂಗಳೂರು: ನಗರದ ನಾಗುರಿಯಲ್ಲಿ ನ. 19ರ ಶನಿವಾರ ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಮೊದಲು ಕರಾವಳಿಯಲ್ಲಿ ಸ್ಯಾಟಲೈಟ್‌ ಫೋನ್‌ಗಳು ರಿಂಗಣಿಸಿತ್ತು ಅಲ್ಲದೆ ಕರಾವಳಿಯ ದಟ್ಟಾರಣ್ಯ ಪ್ರದೇಶದಲ್ಲಿ ನಿಗೂಢ ಚಟುವಟಿಕೆಗಳು ನಡೆದಿರುವ ಬಗ್ಗೆ ಗುಪ್ತಚರ ಮೂಲಗಳು ದೃಢಪಡಿಸಿವೆ.

ಶನಿವಾರ ಸಂಜೆ ಸ್ಫೋಟ ನಡೆದಿದ್ದರೆ ಅದರ ಮುನ್ನಾ ದಿನವಾದ ನ.18ರಂದು ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಸಕ್ರಿಯವಾಗಿದ್ದು ಕರೆಗಳು ಹೋಗಿವೆ.ನ. 19ರಂದು ಬಂಟ್ವಾಳದ ಬಿ.ಸಿ. ರೋಡ್‌ಗೆ ಶಾರೀಕ್‌ ಬಂದಿದ್ದ ಎನ್ನುವ ಹಿನ್ನೆಲೆಯಲ್ಲಿ ಈ ಅಂಶವೀಗ ಮಹತ್ವ ಪಡೆದುಕೊಂಡಿದೆ. ಯಾರೋ ನಿಗೂಢ ವ್ಯಕ್ತಿಗಳು ಸ್ಯಾಟಲೈಟ್‌ ಫೋನ್‌ ಮೂಲಕ ಸಂಪರ್ಕ ಸಾಧಿಸಿದ್ದುದು ಬೇಹುಗಾರಿಕೆ ಇಲಾಖೆಗೆ ಗೊತ್ತಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಎರಡು, ಉಡುಪಿ ಒಂದು ಕಡೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಿಂದ ಸ್ಯಾಟಲೈಟ್ ಫೋನ್ ಮೂಲಕ ಕರೆ ಹೋಗಿದೆ.ಈ ಹಿನ್ನೆಲೆಯಲ್ಲಿ ಸ್ಯಾಟಲೈಟ್‌ ಫೋನ್‌ ಲೊಕೇಶನ್‌ ಆಧರಿಸಿ ಪೊಲೀಸರು ಹಾಗೂ ಎನ್‌ಐಎ ತನಿಖೆಗೆ ಮುಂದಾಗಿದ್ದಾರೆ.

Check Also

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಬೆಳ್ಳಾರೆ ಕೇಂದ್ರ ಮಸ್ಜಿದ್ ನಲ್ಲಿ ಭಯೋತ್ಪಾದನಾ ಚಟುವಟಿಕೆ- ಹಲವಾರು ಅನುಮಾನಗಳಿಗೆ ಕಾರಣವಾದ ಈ ಒಂದು ಪೊಸ್ಟ್..

ಬೆಳ್ಳಾರೆಯ ಝಕರಿಯಾ ಜುಮಾ ಮಸೀದಿ ಮತ್ತು SKSSF ವಿಖಾಯ ಕಾರ್ಯಕರ್ತರಾದ ಅಝರ್ ಮತ್ತು ಜಮಾಲ್ ರವರ ಮೇಲೆ ಸಲಫಿ ನಾಯಕ …

Leave a Reply

Your email address will not be published. Required fields are marked *

You cannot copy content of this page.