ನವದೆಹಲಿ : ಅಲ್ ಖೈದಾ ಹೊಸ ವೀಡಿಯೋವನ್ನ ಬಿಡುಗಡೆ ಮಾಡಿದ್ದು, ಅದರಲ್ಲಿ ಮೋಸ್ಟ್ ವಾಂಟೆಂಡ್ ಉಗ್ರ ಅಲ್-ಜವಾಹಿರಿ ಅವರ ಧ್ವನಿ ಕೇಳಿಸುತ್ತಿದೆ. ಈ ವೀಡಿಯೋದ ಮೂಲಕ, ಭಯೋತ್ಪಾದಕ ಸಂಘಟನೆ ತನ್ನ ನಾಯಕ ಜೀವಂತವಾಗಿದ್ದಾನೆ ಎಂದು ಹೇಳಿಕೊಂಡಿದೆ.
ಮಾಧ್ಯಮ ವರದಿಗಳ ಪ್ರಕಾರ, ಅಲ್-ಖೈದಾ ಈ 35 ನಿಮಿಷಗಳ ವೀಡಿಯೊವನ್ನು ಶುಕ್ರವಾರ (ಡಿಸೆಂಬರ್ 23) ಬಿಡುಗಡೆ ಮಾಡಿದೆ.
ಈ ರೆಕಾರ್ಡಿಂಗ್ ಅಲ್-ಜವಾಹಿರಿಯದ್ದಾಗಿದೆ ಎಂದು ಭಯೋತ್ಪಾದಕ ಸಂಘಟನೆ ಹೇಳಿಕೊಂಡಿದೆ. ಆದಾಗ್ಯೂ, ರೆಕಾರ್ಡಿಂಗ್ ಯಾವಾಗ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನ ನೀಡಲಾಗಿಲ್ಲ. ಈ ವೀಡಿಯೊವನ್ನ ಬಿಡುಗಡೆ ಮಾಡುವ ಮೂಲಕ, ಅಲ್-ಖೈದಾ ತನ್ನ ನಾಯಕ ಇನ್ನೂ ಜೀವಂತವಾಗಿದ್ದು, ಅವನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ ಎಂಬ ಸಂದೇಶವನ್ನ ಯುಎಸ್ಗೆ ಕಳುಹಿಸಿದೆ.
ಅಮೆರಿಕ ಡ್ರೋನ್ ದಾಳಿಯಲ್ಲಿ ಮೃತಪಟ್ಟಿತ್ತು.!
ಅಮೆರಿಕದಲ್ಲಿ ನಡೆದ 9/11ರ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಬಿನ್ ಲಾಡೆನ್ ಜೊತೆಗೆ ಅಲ್-ಜವಾಹಿರಿ ಕೂಡ ಸೇರಿದ್ದರು. ಬಿನ್ ಲಾಡೆನ್ ಹತ್ಯೆಯ ನಂತ್ರ ಯುಎಸ್ ಗುಪ್ತಚರ ಸಂಸ್ಥೆಗಳು ವಿಶ್ವದಾದ್ಯಂತ ಅಲ್-ಜವಾಹಿರಿಗಾಗಿ ಹುಡುಕುತ್ತಿವೆ. ಈ ವರ್ಷದ ಜುಲೈ 31ರಂದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಅಲ್-ಜವಾಹಿರಿಯನ್ನ ಅಮೆರಿಕ ಹತ್ಯೆ ಮಾಡಿತ್ತು. ತಾಲಿಬಾನ್ ಮತ್ತು ಪಾಕಿಸ್ತಾನ ಎರಡೂ ಆತನಿಗೆ ಸಹಾಯ ಮಾಡುತ್ತಿದ್ದವು ಎಂದು ನಂಬಲಾಗಿದೆ.
ಅಲ್-ಜವಾಹಿರಿ ಶವ ಪತ್ತೆಯಾಗಿಲ್ಲ.!
ಅಮೆರಿಕದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ಅಲ್ ಜವಾಹಿರಿ ಮೃತದೇಹ ಪತ್ತೆಯಾಗಿಲ್ಲ. ಡ್ರೋನ್ ದಾಳಿಯು ಎಷ್ಟು ನಿಖರವಾಗಿದ್ದು, ಶಕ್ತಿಯುತವಾಗಿದೆಯೆಂದರೆ ದೇಹವು ಹಾರಿಹೋಗಿದೆ ಎಂದು ಯುಎಸ್ ಹೇಳಿಕೊಂಡಿತ್ತು. ಆದ್ರೆ, ಅಲ್ ಖೈದಾ ತನ್ನ ನಾಯಕ ಸತ್ತಿಲ್ಲ ಎಂದು ಹೇಳಿದ್ದು, ಯುಎಸ್ ಡ್ರೋನ್ ಉಡಾಯಿಸಿದ ಮನೆ ಖಾಲಿಯಾಗಿದೆ ಎಂದು ತಾಲಿಬಾನ್ ಹೇಳುತ್ತದೆ. ಅಲ್ಲಿ ಯಾರೂ ವಾಸಿಸುತ್ತಿರಲಿಲ್ಲ ಎಂದಿದೆ. ಅಂದ್ಹಾಗೆ, ಭಯೋತ್ಪಾದಕ ಸಂಘಟನೆ ತನ್ನ ನಾಯಕನನ್ನ ಜೀವಂತವಾಗಿ ಸಾಬೀತುಪಡಿಸಲು ಮತ್ತು ಅಮೆರಿಕಕ್ಕೆ ಬೆದರಿಕೆ ಹಾಕಲು ನಿರಂತರವಾಗಿ ಪ್ರಯತ್ನಿಸುತ್ತಿದೆ.
ವರದಿಯ ಪ್ರಕಾರ, ಯುಎಸ್ ಗುಪ್ತಚರ ಸಂಸ್ಥೆ ಸಿಐಎನ ವಿಶೇಷ ತಂಡವು ಡ್ರೋನ್ ದಾಳಿಯನ್ನು ನಡೆಸಿದೆ. ಆಗಸ್ಟ್ 2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜವಾಹಿರಿ ಕಾಬೂಲ್ನಲ್ಲಿ ವಾಸಿಸುತ್ತಿದ್ದ. ಕಾಬೂಲ್ನಲ್ಲಿ ಯುಎಸ್ ಏಜೆನ್ಸಿಗಳೊಂದಿಗೆ ಸಂಬಂಧ ಹೊಂದಿರುವ ಜನರು ಕಳೆದ 6 ತಿಂಗಳಿನಿಂದ ನಿರಂತರವಾಗಿ ಆತನನ್ನ ಹಿಂಬಾಲಿಸುತ್ತಿದ್ದರು. ಅವರ ಕುಟುಂಬ ಮತ್ತು ಆಪ್ತ ಸ್ನೇಹಿತರನ್ನು ಸಹ ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗಿತ್ತು.