ಮಂಗಳೂರು: ನಗರದಲ್ಲಿನ ಆಟೋದಲ್ಲಿ ಕುಕ್ಕಲ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣ ಸಂಬಂಧ ಹೊಣೆ ಹೊತ್ತಿರುವಂತ ಉಗ್ರ ಸಂಘಟನೆಯ ಪೋಸ್ಟರ್ ಈಗ ವೈರಲ್ ಆಗಿದೆ.
ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೇಸ್ ಸಂಬಂಧ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಹೆಸರಿನಲ್ಲಿ ಪೋಸ್ಟರ್ ಒಂದು ವೈರಲ್ ಆಗಿದೆ. ಆ ಪೋಸ್ಟರ್ ನಲ್ಲಿ ನಮ್ಮ ಟಾರ್ಗೆಟ್ ಕದ್ರಿ ದೇವಸ್ಥಾನ ಆಗಿತ್ತು. ಆದ್ರೇ ಗುರಿ ತಲುಪುವ ಮುನ್ನವೇ ಬಾಂಬ್ ಬ್ಲಾಸ್ಟ್ ಆಗಿರುವುದಾಗಿ ಹೇಳಿದೆ. ಇನ್ನೂ ಎಡಿಜಿಪಿ ಅಲೋಕ್ ಕುಮಾರ್ ಅವರೇ ನಿಮಗೆ ಒಳಗೊಳಗೆ ಸಂತೋಷ ಆಗುತ್ತಿರಬಹುದು. ಆದ್ರೇ ನಿಮ್ಮ ಈ ಸಂತೋಷ ಕ್ಷಣಿಕವಾಗಿದೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಎಡಿಜಿಪಿ ಅಲೋಕ್ ಕುಮಾರ್ ಅವರು, ನಾನು ಸಂಘಟನೆ ಮತ್ತು ವೈರಲ್ ಆಗಿರುವಂತ ಪೋಸ್ಟರ್ ಬಗ್ಗೆ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತೇವೆ ಎಂದು ತಿಳಿಸಿದ್ದಾರೆ.