ಬೆಳ್ಳಾರೆ: ಉದ್ಯಮಿ ನವೀನ್ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್‌ ; ಅತ್ತೆಯ ಮೇಲೆ ಕಳ್ಳತನ ಆರೋಪ ಹೊರಿಸಿದ ದಿವ್ಯ ಸ್ಪಂದನಾ

ಬೆಳ್ಳಾರೆ:  ಉದ್ಯಮಿ ನವೀನ್ ಕಾಮಧೇನು ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್‌ ದೊರೆತಿದ್ದು, ಸೊಸೆ ಸ್ಪಂದನರವರು ನವೀನ್ ತಾಯಿ ಮೇಲೆ ಚಿನ್ನಾಭರಣ ಕಳ್ಳತನ ಪ್ರಕರಣ ದಾಖಲಿಸಿದ್ದಾರೆ.

ಕಾಂಗ್ರೇಸ್‍ ನಾಯಕಿ ದಿವ್ಯಪ್ರಭಾ ಗೌಡ ಚಿಲ್ತಡ್ಕ ಅವರ ಪುತ್ರಿ ಸ್ಪಂದನ ನವೀನ್ ಅವರು ಬೆಳ್ಳಾರೆ ಕಾವಿನ ಮೂಲೆಯಲ್ಲಿ ಮನೆಯಿಂದ ಚಿನ್ನಾಭರಣ ಕಳವು ಆಗಿರುವುದಾಗಿ ಪೊಲೀಸ್ ದೂರು ನೀಡಿದ್ದಾರೆ.

“ನನ್ನ ಗಂಡ ನವೀನ ಎಂ. ಅತಿಯಾದ ಮದ್ಯ ವ್ಯಸನಿಯಾಗಿದ್ದು ವೈವಾಹಿಕ ಜೀವನದಲ್ಲಿ ನೊಂದು ಬೇಸತ್ತಿದ್ದೇನ. ಕಳೆದ ಕೆಲವು ತಿಂಗಳುಗಳಿಂದ ಇವರ ಮದ್ಯವ್ಯಸನದಿಂದ ಸಹಿಸಲು ಅಸಾಧ್ಯವಾದ ಹಂತಕ್ಕೆ ತಲುಪಿದ್ದು ಇವರ ತಂದೆ ಮಾಧವ ಗೌಡರವರು ಮದ್ಯ ವ್ಯಸನ ಮುಕ್ತ ಚಿಕಿತ್ಸೆಗಾಗಿ ಬೆಂಗಳೂರಿನ ಕಡಂಬಸ್ ಆಸ್ಪತ್ರೆಗೆ ದಾಖಲಿಸಲು ತೀರ್ಮಾನಿಸಿದ್ದರು. ಅದರಂತೆ ಇವರನ್ನು ಕಡಂಬಸ್ ಆಸ್ಪತ್ರೆಗೆ ದಾಖಲು ಮಾಡಿದ್ದು ಈ ಬಗ್ಗೆ ನೀರಜಾಕ್ಷಿಯವರು ಮಾಧವ ಗೌಡ, ದಿವ್ಯಪ್ರಭಾ, ಪರಶುರಾಮ, ಸ್ಪಂದನ, ಸ್ಪರ್ಶಿತ್ ಹಾಗೂ ನವೀನ ರೈ ಎಂಬವರ ಮೇಲೆ ಪೊಲೀಸ್ ದೂರು ಕೊಟ್ಟಿದ್ದು ಅದರಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾವು ಜಾಮೀನು ಪಡೆದು ಮನೆಗೆ ಹೋಗಿ ನೋಡಿದಾಗ ಮನೆಯಿಂದ ಲಾಕರ್ ತೆಗೆದಿದ್ದು, ಅದರ ಒಳಗಿದ್ದ ಚಿನ್ನಾಭರಣಗಳು, ವಜ್ರದ ಹಾರ,ನೆಕ್ಸಸ್, ಉಂಗುರ, ಕಿವಿಯ ಓಲೆಗಳು, ಕರಿಮಣಿ ತಾಳಿ ಚೈನು ಹಾಗೂ ಇತರ ಚಿನ್ನಾಭರಣಗಳು ಮತ್ತು ರಶೀದಿಗಳು ಕಳವಾಗಿರುತ್ತದೆ. ಈ ಚಿನ್ನಾಭರಣಗಳನ್ನು ನೀರಜಾ, ತಾರಾ ಕುಮಾರಿ, ವಿನ್ಯಾಸ್, ಪೂಜಾ ಎಂಬವರು ಕಳ್ಳತನ ಮಾಡಿರುವುದಾಗಿ ಬಲವಾದ ಸಂಶಯವಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ದಿವ್ಯ ಸ್ಪಂದನಾ ದೂರಿನಲ್ಲಿ ತಿಳಿಸಿದ್ದಾರೆ.

ಏನಿದು ಪ್ರಕರಣ..?

ಡಿ. 19ರಂದು ಮಧ್ಯಾಹ್ನ ಆಂಬ್ಯುಲೆನ್ಸ್ ಸಹಿತ ಕೆಲವು ವಾಹನಗಳಲ್ಲಿ ಬಂದ ತಂಡವೊಂದು ಬೆಳ್ಳಾರೆ ಸಮೀಪದ ಕಾಲಿನ ಮೂಲೆಯಲ್ಲಿರುವ ತನ್ನ ಮನೆಯ ಅಂಗಲದಲ್ಲಿದ್ದ ನವೀನ್ ಗೌಡ ರವರನ್ನು ಬಲವಂತವಾಗಿ ಅಂಬ್ಯುಲೆನ್ಸ್ ನಲ್ಲಿ ಹಾಕಿ ಕರೆದುಕೊಂಡು ಹೋಗಿತ್ತು.

ಅಪಹರಣಕ್ಕೊಳಗಾದ ನವೀನ್ ಅವರ ತಂದೆ ಮಾಧವ ಗೌಡ, ನವೀನ್ ಅವರ ಪತ್ನಿ ದಿವ್ಯ ಸ್ಪಂದನ ಚಿಲ್ಲಡ್ಕ, ಕಾಂಗ್ರೆಸ್ ನಾಯಕಿ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ದಿವ್ಯ ಪ್ರಭಾ ಚಿಲ್ಲಡ್ಕ (ದಿವ್ಯ ಸ್ಪಂದನರವರ ತಾಯಿ), ಪರಶುರಾಮ್‌, ಸ್ಪರ್ಶಿತ್ ಹಾಗೂ ನವೀನ್ ರೈ ತಂಬಿನಮಕ್ಕಿ, ಅವರ ಮೇಲೆ ದೂರು ನೀಡಲಾಗಿತ್ತು. ನವೀನ್ ಅವರ ತಾಯಿ ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೀನ್ ಪತ್ನಿ ಸ್ಪಂದನಾ ಅವರು ಬೆಳ್ಳಾರೆ ಕ್ರೈಂ ಎಸ್‌ ಆನಂದ ಎಂಬವರ ಜತೆ ಲಾಡ್ಜ್‌ನಲ್ಲಿ ಇರುವುದನ್ನು ನೋಡಿದ ಬಳಿಕ ನವೀನ್ ಕುಮಾರ್ ಹಾಗೂ ಆತನ ಪತ್ನಿ ಸ್ಪಂದನಳ ಮಧ್ಯೆ ಮೈಮನಸ್ಸು ಉಂಟಾಗಿ ಸ್ಪಂದನ ತವರು ಮನೆಗೆ ಹೋಗಿದ್ದರು ಎನ್ನಲಾಗಿದೆ.

ಡಿ 18 ರಂದು ಸೊಸೆ ಸ್ಪಂದನ, ಆಕೆಯ ಹೆತ್ತವರಾದ ಪರಶುರಾಮ, ದಿವ್ಯಪ್ರಭಾ ಬೆಲ್ಲದ್ರ ತಮ್ಮಸ್ಪರ್ಶಿತ್ ಹಾಗೂ ಸಂಬಂಧಿಕರು ಬಂದು ಮಾತುಕತೆ ನಡೆಸಿದ್ದಾರೆ, ಆ ವೇಳೆ ನವೀನ್ ಕುಮಾರ್ ಪತ್ನಿ ಸ್ಪಂದನಳು ಬೇಡ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ. ಬಳಿಕ ನವೀನ್ ಅವರ ಅಪಹರಣ ನಡೆದಿತ್ತು.

Check Also

ಮಣಿಪಾಲ: ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಲಕ್ಷಾಂತರ ರೂ. ಹಣ ವರ್ಗಾವಣೆ

ಮಣಿಪಾಲ: ವ್ಯಕ್ತಿಯೊಬ್ಬರ ಖಾತೆಯಿಂದ ಮತ್ತೊಂದು ಖಾತೆಗೆ 2,08,004 ರೂ. ಹಣ ವರ್ಗಾವಣೆಗೊಂಡಿರುವ ಘಟನೆ ನಡೆದಿದೆ. ಕಾರ್ಕಳ ಪಳ್ಳಿ ನಿವಾಸಿ ಡಾ| ಗೋಪಿ ನಾಥ್‌ …

Leave a Reply

Your email address will not be published. Required fields are marked *

You cannot copy content of this page.