ಗಣೇಶ ಉತ್ಸವದ ವೇಳೆ ಕಲ್ಲು ತೂರಾಟ : ಎರಡು ಕೋಮುಗಳ ನಡುವೆ ಸಂಘರ್ಷ

ಶಿವಮೊಗ್ಗ : ಜಿಲ್ಲೆಯ ಹೊಳೆಹೊನ್ನೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಸೀದಿಯ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಿ ಎರಡು ಕೋಮುಗಳ ನಡುವೆ ಸಂಘರ್ಷ ನಡೆದಿದೆ ಎನ್ನಲಾಗುತ್ತಿದೆ.

ಮೆರವಣಿಗೆ ಸಾಗುವಾಗ ಮಸೀದಿ ಮುಂಭಾಗ ರಸ್ತೆಯಲ್ಲಿ ದೊಡ್ಡ ಗಾತ್ರದ ಪಟಾಕಿಗಳನ್ನು ಸಿಡಿಸಿದ ಪರಿಣಾಮ ಗಲಭೆ ಆರಂಭವಾಗಿದೆ.

ಪೊಲೀಸರು ಮೆರವಣಿಗೆಯನ್ನು ಮುಂದಕ್ಕೆ ಕಳಿಸಿದ್ದಾರೆ. ಮಸೀದಿಯಲ್ಲಿ ನಮಾಜ್‌ಗೆ ತೆರಳಿದವರು ಹೆಳುವಂತೆ ಬೇರೆಡೆಯಿಂದ ಬಂದವರು ಮಸೀದಿಯ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

ನಮ್ಮ ಬಳಿ ಕಲ್ಲು ತೂರಾಟದ ವಿಡೀಯೊಗಳಿವೆ ಎನ್ನುತ್ತಿದ್ದಾರೆ. ಕಲ್ಲು ತೂರಾಟ ಸುದ್ದಿ ಹರಡುತ್ತಿದ್ದಂತೆ ಮುಸ್ಲಿಂ ಸಮುದಾಯದವರು ಮಸೀದಿ ಆವರಣದಲ್ಲಿ ಜಮಾಯಿಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಪ್ರತಿಭಟನೆ ಆರಂಭಿಸಿದರು.

ಸ್ಥಳಕ್ಕೆ ಅಡಿಷನಲ್ ಎಸ್‌ಪಿ ಅನಿಲ್ ಕುಮಾರ್ ಭೂಮಾರೆಡ್ಡಿ ಭೇಟಿ ನೀಡಿ ಎರಡು ಗುಂಪುಗಳ ನಡುವೆ ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಮುಸ್ಲಿಮರು ಪ್ರತಿಭಟನೆ ನಿಲ್ಲಿಸಿದ್ದಾರೆ.

ಅಲ್ಲದೆ ಸ್ಥಳಕ್ಕೆ ಗ್ರಾಮಾಂತರ ಶಾಸಕಿ ಶಾರದ ಪೂರ‍್ಯಾನಾಯ್ಕ್ ಭೇಟಿ ನೀಡಿ ಘಟನೆಯ ಬಗ್ಗೆ ಪೊಲೀಸ್ ಹಾಗೂ ಮುಸ್ಲಿಮರೊಂದಿಗೆ ಕೆಲಕಾಲ ಚರ್ಚಿಸಿದ್ದಾರೆ. ಮೆರವಣಿಗೆಯಲ್ಲಿದ ಸ್ಥಳೀಯರು ಕಲ್ಲು ತೂರಾಟ ಮಾಡಿಲ್ಲ, ಬೇರೆಡೆಯಿಂದ ಬಂದವರು ಪಟ್ಟಣದ ಶಾಂತಿ ಕದಡುವ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರಿಗೆ ಸೂಕ್ತ ಕ್ರಮ ಜರುಗಿಸುವಂತೆ ಹೇಳಲಾಗಿದ್ದು, ತಪ್ಪಿತಸ್ಥರನ್ನು ಸುಮ್ಮನೆ ಬಿಡುವ ಮಾತಿಲ್ಲ ಎಂದು ಹೇಳಿದರು.

ಆದರೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸುವುದಾಗಿ ಮುಸ್ಲಿಂ ಸಮುದಾಯದವರು ತಿಳಿಸಿದ್ದಾರೆ. ಇದರಿಂದ ಹೊಳೆಹೊನ್ನೂರಿನಲ್ಲಿ ಬೀಗುವಿನ ವಾತವರಣ ನಿರ್ಮಾಣವಾಗಿದೆ.

Check Also

ಮುಲ್ಕಿ: ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದ ಲಾರಿ- ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸರೆ

ಮುಲ್ಕಿ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಹೆದ್ದಾರಿಯ ಡಿವೈಡರ್ ಮೇಲೆ ಹತ್ತಿ ಪಾದಚಾರಿ ಮಾರ್ಗದ ಪಕ್ಕದಲ್ಲಿನ ವಾಹನಗಳಿಗೆ ಡಿಕ್ಕಿಯಾಗಿದೆ. ಪರಿಣಾಮ …

Leave a Reply

Your email address will not be published. Required fields are marked *

You cannot copy content of this page.