March 6, 2026
WhatsApp Image 2023-09-23 at 3.28.48 PM

ಮಾಸೆಬೈಲು, ಸೆ.23: ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ಎಂಬಲ್ಲಿಂದ ನಾಪತ್ತೆಯಾಗಿದ್ದ ಸ್ಥಳೀಯ ನಿವಾಸಿ ಶೀನ ನಾಯ್ಕ ಎಂಬವರ ಪುತ್ರ ವಿವೇಕಾನಂದ(28) ಎಂಬವರು ಎಂಟು ದಿನಗಳ ಬಳಿ ಪತ್ತೆಯಾಗಿದ್ದಾರೆ.

ಸೆ.16ರಂದು ಮನೆಯಿಂದ ಹೊರಗೆ ಹೋದ ಇವರು ಬಳಿಕ ನಾಪತ್ತೆಯಾಗಿದ್ದರು.

ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇಂದು ಮಧ್ಯಾಹ್ನ ತೊಂಬಟ್ಟು ಸಮೀಪದ ಕಬ್ಬಿನಾಲೆ ಎಂಬಲ್ಲಿ ವಿವೇಕಾನಂದ ಪತ್ತೆಯಾಗಿದ್ದಾರೆ. ಕಳೆದ ಎಂಟು ದಿನಗಳಿಂದ ಕಾಡಿನೊಳಗೆಯೇ ಯಾವುದೇ ಆಹಾರ ಇಲ್ಲದೆ ಅಲೆದಾಡಿದ್ದ ವಿವೇಕಾನಂದ, ಕಬ್ಬಿನಾಲೆಯ ಮನೆಯೊಂದರ ಸಮೀಪ ಪತ್ತೆ ಯಾಗಿದ್ದಾರೆ.

ಎಂಟು ದಿನಗಳಿಂದ ಅನ್ನ ಆಹಾರ ಇಲ್ಲದೆ ಅವರು ತೀವ್ರ ನಿತ್ರಾಣಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ

About The Author

Leave a Reply

Your email address will not be published. Required fields are marked *

You cannot copy content of this page.