ಕಾಪು: ಸಾಫ್ಟ್ ವೇರ್ ಎಂಜಿನಿಯರ್ ಯುವತಿಗೆ ಮುಂಬಯಿ ಸೈಬರ್ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಆಕೆಯ ಖಾತೆಯಿಂದ 4.80 ಲಕ್ಷ ರೂ. ನಗದು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಘಟನೆ ಸಂಭವಿಸಿದೆ. ಕಾಪು ಕೊಪ್ಪಲಂಗಡಿ ನಿವಾಸಿಯಾಗಿರುವ ಯುವತಿ ಹಣ ಕಳೆದುಕೊಂಡವರು.ಮಂಗಳೂರಿನ ಕಂಪೆನಿಯೊಂದರಲ್ಲಿ ಇವರು ಕೆಲಸ ಮಾಡುತ್ತಿದ್ದಾರೆ. ಆಕೆ ಕರ್ತವ್ಯದಲ್ಲಿರುವಾಗ 9259996764 ನಂಬರ್‌ನಿಂದ ಮುಂಬಯಿ ಸೈಬರ್ ಪೊಲೀಸರ ಹೆಸರಿನಲ್ಲಿ ಮಹಿಳೆಯೊಬ್ಬರು ಕರೆ ಮಾಡಿ ನಿಮ್ಮ ಹೆಸರಿನಲ್ಲಿ ಬಂದಿರುವ ಕೊರಿಯರ್‌ನಲ್ಲಿ ನಿಷೇಧಿತ ಡ್ರಗ್ಸ್ ಇರುವುದಾಗಿ ತಿಳಿಸಿ, ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು. ಅನಂತರ ಮತ್ತೋರ್ವರಿಗೆ ಕರೆ ಕನೆಕ್ಟ್ ಮಾಡಿದ್ದರು.ಈ ಸಂದರ್ಭ ಮತ್ತೊಬ್ಬ ಮಹಿಳೆ ಮಾತನಾಡಿ, ನಾನು ನಾರ್ಕೋಟಿಕ್ ಡ್ರಗ್ ಡಿಪಾರ್ಟ್‌ಮೆಂಟ್‌ನ ಪೊಲೀಸ್ ಅಧಿಕಾರಿಯಾಗಿದ್ದು, ವಿವರಕ್ಕಾಗಿ ಟೆಲಿಗ್ರಾಂ ಆ್ಯಪ್ ಅನ್ನು ಓಪನ್ ಮಾಡುವಂತೆ ತಿಳಿಸಿದ್ದಳು. ಆಗ ಆ್ಯಪ್ ಇಲ್ಲವೆಂದು ಹೇಳಿದ್ದಕ್ಕೆ ಆ್ಯಪ್ ಡೌನ್‌ಲೋಡ್ ಮಾಡಿಸಿದ್ದರು. ಬಳಿಕ ಮಹಿಳಾ ಪೊಲೀಸ್ ಅಧಿಕಾರಿಯ ಪ್ರೊಪೈಲ್ ಇರುವ ಐಡಿಯೊಂದನ್ನು ಕಳುಹಿಸಿ ನೀವು ಕೊರಿಯರ್ ಕಳುಹಿಸಿರುವ ಬಗ್ಗೆ ನಮಗೆ ತನಿಖೆ ಮಾಡುವುದಕ್ಕಿದೆ. ಕರೆ ಕಟ್ ಮಾಡಬಾರದೆಂದು ಆದೇಶಿಸಿದ್ದರು. ಅವರ ಬೆದರಿಕೆಗೆ ಹೆದರಿದ ಯುವತಿ ಟೆಲಿಗ್ರಾಂ ಆ್ಯಪ್ ಮೂಲಕ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಹಂಚಿಕೊಂಡಿದ್ದರು. ಅವರು ಪೊಲೀಸ್ ಇಲಾಖೆಯ ತನಿಖೆಯ ಬಗೆಗಿನ ವಿವರಗಳನ್ನು ಪಿಡಿಎಫ್ ಫೈಲ್ ಮೂಲಕ ಕಳುಹಿಸಿಕೊಟ್ಟಿದ್ದರು. ಅನಂತರ ಮತ್ತೂಬ್ಬ ವ್ಯಕ್ತಿಯ ಫೋಟೋ ತೋರಿಸಿ, ಈತ ನಿಮ್ಮ ಐಡಿ ಬಳಸಿ, ಬೇರೆ ಬೇರೆ ಹೆಸರಿನಲ್ಲಿ ಖಾತೆ ತೆರೆದು ವಂಚಿಸುತ್ತಿದ್ದಾನೆ. ನಿಮಗೆ ಅವರ ಪರಿಚಯವಿದೆಯೇ ಎಂದು ಪ್ರಶ್ನಿಸಿದ್ದರು. ಪರಿಚಯವಿಲ್ಲವೆಂದು ತಿಳಿಸಿದಾಗ ಆಕೆ ಮತ್ತೋರ್ವ ಅಧಿಕಾರಿಗೆ ಫೋನ್ ಕೊಟ್ಟಿದ್ದು, ಆತ ಪಾರ್ಸೆಲ್ ಕಳುಹಿಸಿದ ಬಗ್ಗೆ ತನಿಖೆಗಾಗಿ ಬ್ಯಾಂಕ್ ಖಾತೆ ಪರಿಶೀಲಿಸಬೇಕು. ಅದಕ್ಕೆ ಆರ್‌ಬಿಐಗೆ ಖಾತೆ ವಿವರ ಕಳುಹಿಸಿಕೊಡಬೇಕಿದೆ. ನಿಮ್ಮ ಖಾತೆಯಿಂದ ಹಣ ರವಾನೆಯಾಗುತ್ತದೆಯೇ ಎಂದು ಪರಿಶೀಲಿಸಬೇಕಿದೆ ಎಂದು ಹೇಳಿ ಒಂದು ಖಾತೆಯನ್ನು ನೀಡಿದ್ದು ಅದಕ್ಕೆ 2 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರು. ಆ ಬಳಿಕ ಮತ್ತೂಂದು ಖಾತೆ ನೀಡಿ ಅದಕ್ಕೆ ಎರಡು ಲಕ್ಷ ರೂಪಾಯಿ ವರ್ಗಾಯಿಸಿಕೊಂಡಿದ್ದರು. ಮತ್ತೆ ಖಾತೆಯಲ್ಲಿ 80 ಸಾವಿರ ಉಳಿದಿದ್ದು, ಅದನ್ನು ಯುಪಿಐ ಐಡಿ ನೀಡಿ ವರ್ಗಾಯಿಸಿಕೊಂಡಿದ್ದರು.
Check Also
ಬಂಟ್ವಾಳ: ಬ್ಯಾಂಕ್ ಶಾಖೆಯೊಳಗಿಂದಲೇ ನಿವೃತ್ತ ಸೈನಿಕರೊಬ್ಬರ 1.30 ಲಕ್ಷ ಇದ್ದ ಬ್ಯಾಗ್ ಕಳವು
ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನ ಬ್ಯಾಂಕ್ ಶಾಖೆಯೊಳಗಿಂದಲೇ ನಿವೃತ್ತ ಸೈನಿಕರೊಬ್ಬರ 1.30 ಲಕ್ಷ ರೂ. ನಗದು ಇದ್ದ ಬ್ಯಾಗ್ ಎಗರಿಸಿ ಪರಾರಿಯಾಗಿರುವ …