December 22, 2024
WhatsApp Image 2023-01-23 at 1.23.32 PM

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಒಟ್ಟೆ ಕಾಯರ್ ಎಂಬಲ್ಲಿ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಉಳ್ಳಾಲ ಕೋಟೆಕಾರ್ ಮಾಡೂರು ನಿವಾಸಿ ಚಂದ್ರಶೇಖರ-ಗಿರಿಜಾ ದಂಪತಿ ಪುತ್ರಿ ದಿವ್ಯಾ(26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಒಂದೂವರೆ ವರ್ಷದ ಹಿಂದಷ್ಟೇ ಒಟ್ಟೆಕಾಯರ್ ನಿವಾಸಿ ಹರೀಶ್ ಎಂಬವರನ್ನು ಮದುವೆಯಾಗಿದ್ದರು.
ದಂಪತಿ ಶನಿವಾರ ನೆರೆಮನೆಯಲ್ಲಿ ಜರುಗಿದ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಜಗಳ ನಡೆದಿದ್ದು ದಿವ್ಯಾ ಬೇಸರಗೊಂಡು ವಾಪಸ್ ಮನೆಗೆ ಬಂದಿದ್ದರು. ಇದರಿಂದ ನೊಂದಿದ್ದ ದಿವ್ಯಾ ನಿನ್ನೆ ಸಂಜೆ ಬೆಡ್ ರೂಮ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುರತ್ಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.