ಗುಜರಾತ್: ತಾಯಿ ಮತ್ತು ಮಗಳ ಶವ ಆಸ್ಪತ್ರೆಯಲ್ಲಿ ಪತ್ತೆಯಾದ ಘಟನೆ ಅಹಮದಾಬಾದ್‌ನ ಭೂಭಾಯ್ ಪಾರ್ಕ್ ಬಳಿ ನಡೆದಿದೆ.
ಆಪರೇಷನ್ ಥಿಯೇಟರ್ ನ ಕಪಾಟಿನಲ್ಲಿ ಮಗಳ ಶವ ಪತ್ತೆಯಾಗಿದ್ದು, ನಂತರ ಹಾಸಿಗೆಯ ಕೆಳಗೆ ತಾಯಿಯ ಶವ ಪತ್ತೆಯಾಗಿದೆ. ಕಗ್ಡಾಪಿತ್ ಪೊಲೀಸ್ ಠಾಣೆ ವ್ಯಾಪ್ತಿಯ ಭೂಲಾಭಾಯಿ ಪಾರ್ಕ್ ಬಳಿ ಇರುವ ಆಸ್ಪತ್ರೆಯೊಳಗೆ ಕೆಟ್ಟ ವಾಸನೆ ಬರುತ್ತಿದೆ ಎಂದು ನಮಗೆ ಮಾಹಿತಿ ಬಂದಿತ್ತು.ಆಸ್ಪತ್ರೆಯ ಆಪರೇಷನ್ ಥಿಯೇಟರ್ ಒಳಗಿದ್ದ ಕಪಾಟು ವಾಸನೆ ಬರುತ್ತಿದ್ದನ್ನು ಆಸ್ಪತ್ರೆಯ ಸಿಬ್ಬಂದಿ ಅದನ್ನು ತೆರೆದರು.ಒಳಗೆ 30 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಬಳಿಕ ಆಸ್ಪತ್ರೆ ಕಪಾಟಿನಲ್ಲಿ ಮಗಳ ಶವ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಚಿಕಿತ್ಸೆಗಾಗಿ ತಾಯಿ ಮತ್ತು ಮಗಳು ಆಸ್ಪತ್ರೆಗೆ ಬಂದಿದ್ದರು ಎಂದು ಎಸಿಪಿ ಮಿಲಾಪ್ ಪಟೇಲ್ ಹೇಳಿದ್ದಾರೆ.ಈ ಸಂಬಂಧ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಓರ್ವನಿಗೆ ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.