

ದಾವಣಗೆರೆ: ಹಾಡಹಗಲೇ ದುಷ್ಕರ್ಮಿಯೋರ್ವ ನಡು ರಸ್ತೆಯಲ್ಲೇ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ವಿನೋಬಾನಗರದ ನಿವಾಸಿ ಚಾಂದ್ ಸುಲ್ತಾನಾ (24) ಎಂದು ಗುರುತಿಸಲಾಗಿದೆ.
ದಾವಣಗೆರಯ ಪಿಜೆ ಬಡಾವಣೆಯ ಚರ್ಚ್ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವತಿಗೆ ದುಷ್ಕರ್ಮಿ ಬರ್ಬರವಾಗಿ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರು ಪ್ರಾಣ ಉಳಿಸಲಾಗಲಿಲ್ಲ. ಈ ನಡುವೆ ಪರಿಸರದ ಸಿಸಿ ಟಿವಿಗಳನ್ನು ಪರಿಶೀಲಿಸಿ ಹಂತಕನನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.
ಚಾಂದ್ ಸುಲ್ತಾನಾಳಿಗೆ 8 ತಿಂಗಳ ಹಿಂದೆ ಹರಿಹರ ಮೂಲದ ಯುವಕನೊಂದಿಗೆ ನಿಶ್ಚಿತಾರ್ಥ ಆಗಿತ್ತು. ವಿವಾಹಕ್ಕೆ ವಿರೋಧಿಸಿ ಸುಲ್ತಾನಳನ್ನು ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಈ ಕುರಿತು ದಾವಣಗೆರೆ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ