ನವದೆಹಲಿ – ಚೀನಾದಲ್ಲಿ ಕೊರೋನಾ ದೊಡ್ಡ ಪ್ರಮಾಣದಲ್ಲಿ ಭೀಕರ ರೂಪವನ್ನು ತಾಳಿದೆ.
ಇಲ್ಲಿ ಮುಂದಿನ ೩ ತಿಂಗಳಲ್ಲಿ ಲಕ್ಷಾಂತರ ಜನರ ಸಾವು ಸಂಭವಿಸಲಿರುವ ಸಾಧ್ಯತೆಯನ್ನು ಊಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಜಗತ್ತಿನಲ್ಲಿ ಜಾಗೃತೆಯಿಂದಿರಲು ಎಚ್ಚರಿಸಲಾಗಿದೆ. ಭಾರತದಲ್ಲಿಯೂ ಕೇಂದ್ರೀಯ ಆರೋಗ್ಯ ಮಂತ್ರಿಗಳಾದ ಡಾ. ಭಾರತಿ ಪವಾರರವರು ‘ದೇಶದಲ್ಲಿ ಪುನಃ ಮಾಸ್ಕನ್ನು ಖಡ್ಡಾಯಗೊಳಿಸುವ ಸಾಧ್ಯತೆ ನಿರ್ಮಾಣವಾಗಿದೆ’, ಎಂದು ಪತ್ರಿಕಾ ಪರಿಷತ್ತಿನಲ್ಲಿ ಹೇಳಿದ್ದಾರೆ. ಚೀನಾದ ಪರಿಸ್ಥಿತಿಯಿಂದಾಗಿ ಭಾರತದಲ್ಲಿ ಜಾಗೃತೆಯ ಕ್ರಮವೆಂದು ಉಪಾಯಯೋಜನೆಗಳನ್ನು ಮಾಡಲಾಗುತ್ತಿದೆ. ಕೇಂದ್ರೀಯ ಆರೋಗ್ಯ ಮಂತ್ರಾಲಯದಿಂದ ಮಾರ್ಗದರ್ಶಕ ತತ್ತ್ವಗಳನ್ನು ಜ್ಯಾರಿಗೊಳಿಸಲಾಗಿದೆ. ಕೇಂದ್ರೀಯ ಆರೋಗ್ಯ ಮಂತ್ರಿಗಳಾದ ಭಾರತಿ ಪವಾರರವರು ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡುತ್ತ, ಕೊರೋನಾದಿಂದಾಗಿ ಕಳೆದ ೨ ವರ್ಷಗಳಲ್ಲಿ ದೇಶದಲ್ಲಿ ಅನೇಕ ಜೀವಗಳನ್ನು ಕಳೆದುಕೊಳ್ಳಬೇಕಾಯಿತು. ಸಂಪೂರ್ಣ ದೇಶದಲ್ಲಿನ ಉದ್ಯೋಗಗಳು ಸ್ತಬ್ದವಾಗಿದ್ದವು. ಕೊರೋನಾದ ಮೇಲೆ ನಿಯಂತ್ರಣ ಸಾಧಿಸಲು ಭಾರತದಲ್ಲಿ ಕೊರೋನಾದ ಲಸಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ನೀಡಲಾಗಿತ್ತು. ಭಾರತವು ೨೨೦ ಕೋಟಿ ಲಸಿಕಾಕರಣದ ಹಂತವನ್ನು ತಲುಪಿದೆ. ಚೀನಾದಲ್ಲಿ ಪುನಃ ಕೊರೋನಾದ ಭೀಕರತೆಯು ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಕೊರೋನಾದ ರೋಗಿಗಳು ಹೆಚ್ಚುತ್ತಿರುವುದರಿಂದ ಇತರ ದೇಶಗಳು ಜಾಗೃತೆ ವಹಿಸಲು ಆರಂಭಿಸಿವೆ. ವಿದೇಶದಿಂದ ಬರುವ ಜನರಿಂದ ಭಾರತದಲ್ಲಿ ಸೋಂಕು ಹರಡದಿರುವಂತೆ ಸರಕಾರವು ಗಮನ ನೀಡುವುದು, ಎಂದು ಹೇಳಿದರು.