ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಪದೇ ಪದೇ ಲವ್ ಜಿಹಾದ್ ಪ್ರಕರಣಗಳ ಬೆಳಕಿಗೆ ಬರುತ್ತಿದೆ. ಅಂತೆಯೇ ಬೆಳ್ತಂಗಡಿ ಖಾಸಗಿ ಕಾಲೇಜೊಂದರ ಹಿಂದೂ ವಿದ್ಯಾರ್ಥಿನಿ, ಮುಸ್ಲಿಂ ಯುವಕನೊಂದಿಗೆ ಹೋದ ಕಾರಣಕ್ಕೆ ವಿದ್ಯಾರ್ಥಿನಿಯನ್ನು ಮಾತ್ರ ಕಾಲೇಜಿನಿಂದ ಡಿಬಾರ್ ಮಾಡಿದ್ದಾರೆ. ಮುಸ್ಲಿಂ ವಿದ್ಯಾರ್ಥಿಯನ್ನು ಡಿಬಾರ್ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಮಂಗಳೂರು ಹಿಂದೂಸ್ ಎಂಬ ಪೇಸ್‌ಬುಕ್ ಪೇಜಿನಲ್ಲಿ ಪೋಸ್ಟರ್‌ವೊಂದು ಹರಿದಾಡುತ್ತಿದೆ.
“ಬೆಳ್ತಂಗಡಿ ಕಾಲೇಜಿನಲ್ಲಿ ನಡೆದ ಘಟನೆಯಲ್ಲಿ ಜಿಹಾದಿ ಜೊತೆ ಹೋದ ಯುವತಿಯನ್ನು ಕಾಲೇಜ್‌ನಿಂದ ಡಿಬಾರ್ ಮಾಡಿದ್ದಾರೆ. ಆದರೆ ಜಿಹಾದಿ ಹುಡುಗನನ್ನು ಡಿಬಾರ್ ಮಾಡಿಲ್ಲ, ಶಿಕ್ಷೆ ಇಬ್ಬರಿಗೂ ಒಂದೇ ಆಗಬೇಕು. ಜಿಹಾದಿಯನ್ನು ಕೂಡಲೇ ಡಿಬಾರ್ ಮಾಡಿ..ಇಲ್ಲದಿದ್ದಲ್ಲಿ ಮುಂದಿನ ದಿನ ನಾವು ಮಾಡಬೇಕಾದ ಕೆಲಸ ಮಾಡುತ್ತೇವೆ” ಎಂಬ ಬರಹದೊಂದಿಗೆ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.