ಶಬರಿಮಲೆ : ಈ ವರ್ಷ ಶಬರಿಮಲೆ ಯಾತ್ರೆಗೆ ತೆರಳಿದವರಲ್ಲಿ ಹೃದಯಾಘಾತದಿಂದ 23 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯಿಂದ 106 ಮಂದಿಯನ್ನು ಪಂಪಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದು ಕೋವಿಡ್ ನಂತರದ ಸಮಸ್ಯೆಗಳಿಗೆ ಸಂಬಂಧಿಸಿರಬಹುದು ಎಂದು ತಜ್ಞರು ಮಾಹಿತಿ ತಿಳಿಸಿದ್ದಾರೆ. ನೀಲಿಮಲ ಮತ್ತು ಅಪಾಚಿಮೇಡುವಿನಲ್ಲಿ ಹೆಚ್ಚಿನ ಜನರು ಅಸ್ವಸ್ಥಗೊಂಡಿದ್ದಾರೆ. 35 ದಿನಗಳಲ್ಲಿ 24 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ 23 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪಂಪಾ ಮತ್ತು ಸನ್ನಿಧಾನಂ ನಡುವಿನ ಕಾರ್ಡಿಯೋ ಕೇಂದ್ರಗಳಲ್ಲಿ ಕೇವಲ ಆಮ್ಲಜನಕ ಸಿಲಿಂಡರ್‌ಗಳು ಮಾತ್ರ ಇವೆ. ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆ ರವಾನೆ ಮಾಡಬೇಕಾಗುತ್ತದೆ. ಇನ್ನೂ ಈ ಪ್ರದೇಶದ ರಸ್ತೆಗಳಲ್ಲಿ ತುರ್ತು ಸೇವೆಗಳಿಗಾಗಿ ಯಾವುದೇ ಅಂಬುಲೆನ್ಸ್ ತೆರಳಲು ಸರಿಯಾದ ಮಾರ್ಗಗಳೂ ಇಲ್ಲ. ಎತ್ತರವಾದ ಮೆಟ್ಟಿಲುಗಳನ್ನು ಹತ್ತುವ ಸಂದರ್ಭದಲ್ಲಿ ಈ ಸಮಸ್ಯೆಗೆ ಒಳಗಾಗಿರಬಹುದು ಇದು ಕೋವಿಡ್ ಸೋಕಿಗೆ ಒಳಗಾದವರಲ್ಲಿ ಹೆಚ್ಚು ಕಾಣಿಸಿಕೊಂಡಿರಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ