ಮಂಗಳೂರು ಆಟೋ ಸ್ಫೋಟ ಪ್ರಕರಣ; ನಿಷೇಧಿತ ಪಿಎಫ್​ಐ ಸಂಘಟನೆ ಮುಖಂಡ NIA ವಶಕ್ಕೆ

ಮಂಗಳೂರು ಆಟೋ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್​ಐಎ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ನಿಷೇಧಿತ ಪಿಎಫ್​ಐ ಸಂಘಟನೆ ಮುಖಂಡನೋರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪಿಎಫ್​ಐ ಮುಖಂಡ ಇಜಾಜ್​ ಎಂಬಾತನನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದಿರುವ ಪಿಎಫ್​ಐ ಮುಖಂಡ ಇಜಾಜ್​ ದ‌ಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನಿವಾಸಿ ಎಂದು ತಿಳಿದು ಬಂದಿದೆ. ಪಿಎಫ್​ಐ ನಿಷೇಧವಾದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪಿಎಫ್​ಐ ಮುಖಂಡರನ್ನು ಬಂಧಿಸಲಾಗಿತ್ತು. ಈ ವೇಳೆ ಬಂಧಿತನಾಗಿದ್ದ ಈತ 10 ದಿನಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದನು. ಈ ಮಧ್ಯೆ ಇಂದು ದುಬೈಗೆ ಹಾರಲು ಪಿಎಫ್​ಐ ಮುಖಂಡ ಇಜಾಜ್ ಪ್ಲಾನ್ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.

ಆಟೋ ಸ್ಪೋಟದಲ್ಲಿ ಗಾಯಗೊಂಡಿರುವ  ಅನುಮಾನಾಸ್ಪದ ವ್ಯಕ್ತಿ ಹಾಗೂ ಚಾಲಕ  ಪುರುಷೋತ್ತಮ್ ಗೆ ಚಿಕಿತ್ಸೆ ಫಾದರ್ ಮುಲ್ಲಾರ್ ಆಸ್ಪತ್ರೆಯ ಐಸಿಯು ಬರ್ನಿಂಗ್ ವಾರ್ಡ್​​ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಐಸಿಯು ಹೊರಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಚಾಲಕ ಪುರುಷೋತ್ತಮ್​ ಪತ್ನಿ ಹಾಗೂ ಕುಟುಂಬಸ್ಥರನ್ನು ಸಹ ಪೊಲೀಸರು  ಆಸ್ಪತ್ರೆಯೊಳಗೆ ಬಿಡುತ್ತಿಲ್ಲ.

Check Also

ಮಳೆಯ ಹಿನ್ನೆಲೆ ಆಗುಂಬೆ ಘಾಟಿಯಲ್ಲಿ ಸೆ.15ರವರೆಗೆ ಭಾರೀ ವಾಹನಗಳ ಸಂಚಾರ ನಿಷೇಧ

ಆಗುಂಬೆ: ನಿರಂತರ ಮಳೆಯ ಹಿನ್ನೆಲೆ ಆಗುಂಬೆ ಘಾಟಿಯಲ್ಲಿ ಸೆ.15ರವರೆಗೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದು …

Leave a Reply

Your email address will not be published. Required fields are marked *

You cannot copy content of this page.