

ಮಂಗಳೂರು : ಮಂಗಳೂರಿನಲ್ಲಿ ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ತನಿಖೆ ಚುರುಕಿನಿಂದ ನಡೆಯುತ್ತಿದೆ ಎಂದು ಹೇಳಿದರು.
ಮಂಗಳೂರಿನ ನಡೆದ ಆಟೋ ರಿಕ್ಷಾದಲ್ಲಿ ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಭಾಗಿಯಾದವನ ಬಗ್ಗೆ ನಮಗೆ ಗೊತ್ತಾಗಿದೆ, ಆತನ ಬಗ್ಗೆ ಸಾಕಷ್ಟು ವಿಚಾರ ತಿಳಿದಿದೆ , ನಮ್ಮ ತಂಡ ಆತನ ಸಂಪರ್ಕ ಇರುವ ಕಡೆಗಳಲ್ಲಿ ಹೋಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಪ್ರಕರಣದಲ್ಲಿ ಯಾರೂ ಇದ್ದಾನೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಆತನ ಗುರುತು ಪತ್ತೆ ಕಾರ್ಯ ನಡೆಯುತ್ತಿದ್ದು, ಆತನ ಗುರುತು ಪತ್ತೆ ಹಚ್ಚಲು ಸಂಬಂಧಿಕರನ್ನು ಕರೆದಿದ್ದೇವೆ, ಅವರು ಬಂದು ಗುರುತಿಸಿದ ನಂತರ ನಾವು ಖಚಿತಪಡಿಸುತ್ತೇವೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಆರೋಪಿಯ ಮುಖ ಸಾಕಷ್ಟು ಸುಟ್ಟಿದೆ, ಆತ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ, ಇಂದು ರಾತ್ರಿ ಅಥವಾ ನಾಳೆವರೆಗೆ ವಿಚಾರಣೆ ಮುಂದುವರೆಯುತ್ತದೆ, ತರಾತುರಿಯಲ್ಲಿ ಏನನ್ನೂ ಹೇಳಲು ಆಗುವುದಿಲ್ಲ, 12 ರಿಂದ 15 ಗಂಟೆ ಕಾಲ ತನಿಖೆ ನಡೆಯಲಿದೆ ಎಂದರು. ಎಡಿಜಿಪಿ ಅಲೋಕ್ ಕುಮಾರ್ ಶಂಕಿತ ಉಗ್ರನಿಂದ ‘ಬೇರೆ ಕಡೆ ಬಾಂಬ್ ಸ್ಪೋಟಿಸುವ ಪ್ಲ್ಯಾನ್’ ಇತ್ತು, ತಪ್ಪಿ ಆಟೋದಲ್ಲಿ ಸ್ಪೋಟವಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಪೊಲೀಸರು ಎಲ್ಲಾ ಹಂತದಲ್ಲಿಯೂ ತನಿಖೆಯನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಖಚಿತ ಮಾಹಿತಿ ಲಭ್ಯವಾಗಬೇಕಿದೆ.