ಮಂಗಳೂರು: ಭಾರತದಲ್ಲಿ ತಲಾಖು ಇಲ್ಲ ; ತ್ರಿವಳಿ ತಲಾಖೂ ಇಲ್ಲ; ಆದರೂ ವಿದೇಶದಲ್ಲಿರುವ ಪತಿರಾಯನೊಬ್ಬ ಡೆಲಿವರಿಗೆಂದು ಭಾರತಕ್ಕೆ ಬಂದಿರುವ ತನ್ನ ಹೆಂಡತಿಗೆ ತಲಾಖ್ ನೀಡಿದ್ದಾನೆ. ಅಂದ್ರೆ ವಿವಾಹ ವಿಚ್ಛೇದನ ನೀಡಿದ್ದಾನೆ. ತನ್ನ ಗಂಡ ವಾಟ್ಸಾಪ್ ನಲ್ಲಿ ತ್ರಿವಳಿ ತಲಾಖ್ ನೀಡಿದ್ದು, ಕಾನೂನು ಕ್ರಮ ಕೈಗೊಳ್ಳಿ ಎಂದು ಗಂಡನ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪತ್ನಿ ಎರಡನೇ ಮಗುವಿನ ಹೆರಿಗೆಗೆ ಭಾರತಕ್ಕೆ ಬಂದಿದ್ದು, 6 ತಿಂಗಳಿಂದ ಇಲ್ಲೇ ನೆಲೆಸಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಮಧ್ಯೆ ಆಕೆಯ ವಿರುದ್ಧ ವೈಮನಸ್ಯ ಬೆಳೆಸಿಕೊಂಡ ಗಂಡ ಅಬ್ದುಲ್ ರಷೀದ್ ದಿಢೀರನೆ ತಲಾಕ್ ಸಂದೇಶ ರವಾನಿಸಿದ್ದಾನೆ.ತ್ರಿವಳಿ ತಲಾಖ್ಗೆ ದೇಶಾದ್ಯಂತ ನಿಷೇಧವಿದ್ದು, ಅದನ್ನು ಅನುಸರಿಸಿದರೆ ಕಠಿಣ ಶಿಕ್ಷೆ ಜಾರಿಗೊಳಿಸುವ ಕಾಯ್ದೆ ಜಾರಿ ಮಾಡಲಾಗಿದೆ. ಹಾಗಿದ್ದರೂ, ಅಬ್ದುಲ್ ರಷೀದ್ ಎಂಬಾತ ಇಸ್ಲಾಂ ನಿಯಮವನ್ನು ಪತ್ನಿಯ ಮೇಲೆ ಹೇರಲು ಯತ್ನಿಸಿದ್ದಾನೆ. ಅಬ್ದುಲ್ ರಷೀದ್ ಮೂಲತಃ ಕೇರಳದ ತ್ರಿಶೂರ್ ನಿವಾಸಿ.ಮೊದಲ ಮಗುವಾದ ಬಳಿಕ ಮಿಸ್ರೀಯಾ ವಿದೇಶದಲ್ಲಿ ಪತಿ ಜೊತೆ ನೆಲೆಸಿದ್ದರು. ಎರಡನೇ ಮಗುವಿನ ಹೆರಿಗೆಗೆ ಬಂದಾಗ ಮನಸ್ತಾಪ ತಲೆದೋರಿದೆ ಎಂದು ತಿಳಿದುಬಂದಿದೆ. ಸುಳ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.