ಒಳ ಉಡುಪಿನಲ್ಲಿತ್ತು 2 ಕೋಟಿ ರೂಪಾಯಿ ಮೌಲ್ಯದ 3.9 ಕೆ.ಜಿ. ಚಿನ್ನ!

ವದೆಹಲಿ: ವಿಮಾನನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುವವರು ಸಿಕ್ಕಿಬೀಳುತ್ತಿರುವ ಪ್ರಕರಣಕ್ಕೆ ಇಂದು ಮತ್ತೊಂದು ಸೇರ್ಪಡೆ ಆಗಿದ್ದು, ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಚಿನ್ನ ಪತ್ತೆಯಾಗಿದೆ.

ಜನ್ಮದಿನ ಆಚರಿಸಿಕೊಳ್ಳುವವರಿಗೆ ವಂಡರ್ಲಾದಲ್ಲಿ ಉಚಿತ ಟಿಕೆಟ್​; ಇಲ್ಲಿದೆ ವಿವರ..

ಎಐ ಏರ್​ಪೋರ್ಟ್ ಸರ್ವಿಸಸ್ ಲಿಮಿಟೆಡ್​ನ ಸಿಬ್ಬಂದಿಯೇ ಈ ಕಳ್ಳಸಾಗಣೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ. ಶ್ರೀಲಂಕಾ ಮೂಲದ ಈ ವ್ಯಕ್ತಿಯನ್ನು ಸಿಐಎಸ್​ಫ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಭಾರಿ ಪ್ರಮಾಣದ ಚಿನ್ನ ಪತ್ತೆಯಾಗಿದೆ.

ಅನುಮಾನಾಸ್ಪದವಾಗಿ ಕಂಡುಬಂದ ಈ ವ್ಯಕ್ತಿಯನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದಾಗ ಒಳ ಉಡುಪಿನಲ್ಲಿ ಅಡಗಿಸಿ ಇರಿಸಿಕೊಂಡಿದ್ದ 3.9 ಕೆ.ಜಿ. ತೂಕದ ಚಿನ್ನದ ಪೇಸ್ಟ್​ ಪತ್ತೆ ಆಗಿದೆ. ಪ್ಲಾಸ್ಟಿಕ್​ ಪೊಟ್ಟಣಗಳಲ್ಲಿ ಈ ಪೇಸ್ಟ್ ಇರಿಸಿಕೊಳ್ಳಲಾಗಿತ್ತು. ಇವುಗಳ ಒಟ್ಟು ಮೊತ್ತ 2 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

Check Also

ಶಾಲೆಗಳಿಗೆ ಬಾಂಬ್‌ ಬೆದರಿಕೆ : ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ – ಖಾರಿಜೈಟ್ಸ್ ಹೆಸರಲ್ಲಿ ಇ-ಮೇಲ್

ಬೆಂಗಳೂರು : ಇಂದು ಬೆಳ್ಳಂಬೆಳಿಗ್ಗೆ ಸಿಲಿಕಾನ್‌ ಸಿಟಿಯಲ್ಲಿ 15 ಖಾಸಗಿ ಶಾಲೆಗಳಿಗೆ ಬಾಂಬ್‌ ಬೆದರಿಕೆಯ ಇ-ಮೇಲ್​ ವೊಂದು ಬಂದಿದೆ. ಇದರಿಂದ …

Leave a Reply

Your email address will not be published. Required fields are marked *

You cannot copy content of this page.