
ಬಂಟ್ವಾಳ : ಖ್ಯಾತ ಚಲನಚಿತ್ರ ನಟಿ ರಚಿತರಾಮ್ ಕರಾವಳಿಯ ಕಾರಣೀಕ ದೈವ ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ್ದಾರೆ.
ಬೆಂಜನಪದವಿನ ವಿಜಯ್ ಎಂಬವರ ಮನೆಯಲ್ಲಿ ಆರಾಧಿಸಿಕೊಂಡು ಭಕ್ತರ ಕಷ್ಟಗಳನ್ನು ಈಡೇರಿಸುವ ಕೊರಗಜ್ಜ ದೈವಕ್ಕೆ ನಟಿ ರಚಿತರಾಮ್ ಅವರು ಹರಕೆಯ ರೂಪದಲ್ಲಿ ಮೇ16 ರಂದು ರಾತ್ರಿ ಕೋಲ ಸೇವೆ ನೀಡಿದ್ದಾರೆ. ಅವರು ಯಾವ ಉದ್ದೇಶದಿಂದ ಕೋಲ ಸೇವೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
ಆದರೆ ಅನೇಕ ವರ್ಷಗಳಿಂದ ಭಕ್ತರ ಆರಾಧನಾ ಕೇಂದ್ರವಾಗಿ ಬೆಳೆಯುತ್ತಿರುವ ಬೆಂಜನಪದವು ಕ್ಷೇತ್ರಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದರೂ ತುಳುನಾಡಿನ ದೈವದ ಕುರಿತು ವಿಶೇಷ ಭಕ್ತಿಯನ್ನು ಹೊಂದಿ ಕ್ಷೇತ್ರಕ್ಕೆ ಆಗಮಿಸಿ ಸೇವೆ ನೀಡಿದ್ದಾರೆ.
