December 8, 2024
IMG-20221115-WA0055

ಸಂಚಾರ ನಿಯಮ ಉಲ್ಲಂಘನೆಯ ಕಾರಣದಿಂದಾಗಿ ಪೊಲೀಸರು ದಂಡ ಹಾಕುವುದು ಸಾಮಾನ್ಯ ಹಾಗೂ ಕಾನೂನಾತ್ಮಕ ಪ್ರಕ್ರಿಯೆ. ಒಂದೊಮ್ಮೆ ದಂಡ ಹಾಕಿದ ಸಂದರ್ಭದಲ್ಲಿ ವಾಹನ ಸವಾರರಲ್ಲಿ ಹಣ ಇಲ್ಲದಿದ್ದರೆ ಪೊಲೀಸ್ ಠಾಣೆಗೋ ಅಥವಾ ನ್ಯಾಯಾಲಯಕ್ಕೋ ತೆರಳಿ ಕಟ್ಟಬೇಕಿತ್ತು. ಇದು ಸಾಮಾನ್ಯ ಜನರಿಗೆ ಕಷ್ಟವೂ ಹಾಗೂ ಕೆಲವರಿಗೆ ಹಿಂಜರಿಕೆಯೂ ಆಗಿತ್ತು.

ಈಗ ಪೊಲೀಸ್ ಇಲಾಖೆ ಹೊಸ ಪ್ರಯೋಗವನ್ನು ಜಾತಿಗೆ ತರಲು ಮುಂದಾಗಿದೆ. ಮಂಗಳೂರು ನಗರ ಪೊಲೀಸ್  ಮತ್ತು ಅಂಚೆ ಇಲಾಖೆಯ ಸಹಯೋಗದಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ ಶುಲ್ಕವನ್ನು  ಅಂಚೆ ಕಚೇರಿ ಗಳಲ್ಲಿ ಪಾವತಿ ಸೌಲಭ್ಯವನ್ನು ಇಂದು ಉದ್ಘಾಟನೆ ಮಾಡಲಾಗಿದೆ. ಪ್ರಯಾಣದ ಅವಧಿಯಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸಿ ದಂಡ ವಿಧಿಸಿಕೊಂಡಲ್ಲಿ ಯಾವುದೇ ಅಂಚೆ ಕಚೇರಿಯಲ್ಲಿ ದಂಡ ಕಟ್ಟಬಹುದಾಗಿದೆ. 

ಈ ಬಗ್ಗೆ ಅಧಿಕೃತವಾಗಿ ಸೌಲಭ್ಯವನ್ನು ಉದ್ಘಾಟಿಸಿ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್  ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.