ಆಂಧ್ರಪ್ರದೇಶ: ಕುದಿಯುತ್ತಿದ್ದ ಸಾಂಬಾರಿಗೆ ಬಿದ್ದು ಮೂರು ವರ್ಷದ ಮಗುವೊಂದು ದಾರುಣವಾಗಿ ಮೃತಪಟ್ಟ ಘಟನೆ ಆಂದ್ರಪ್ರದೇಶದ ಕರ್ನೂಲು ಎಂಬಲ್ಲಿ ನಡೆದಿದೆ.
ಸೋಮನಾಥ್ (3) ಮೃತ ಕಂದಮ್ಮ.
ಸಂಬಂಧಿಕರ ಮನೆಯ ಪೂಜೆಗೆಂದು ಬಂದಿದ್ದ ಪೋಷಕರ ಜೊತೆಯಲ್ಲಿ ಮಗುವನ್ನು ಕೂಡಾ ಕರೆತರಲಾಗಿತ್ತು. ಅಲ್ಲಿ ಆಕಸ್ಮಿಕವಾಗಿ ಬಿಸಿ ಸಾಂಬಾರಿಗೆ ಬಿದ್ದು ಗಾಯಗೊಂಡಿದ್ದರಿಂದ ಕರ್ನೂಲಿಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ.