ಪುತ್ತೂರು: ಬಸ್ ಫ್ರೀ ಆದ ಬೆನ್ನಲೆಯಲ್ಲೇ ವಿವಾಹಿತ ಮಹಿಳೆಯೊಬ್ಬರು ಫ್ರೀ ಬಸ್ ನಲ್ಲೆ ಪ್ರಿಯಕನನ್ನು ನೋಡಲು ಎಂದು ಹುಬ್ಬಳಿಯಿಂದ ಪುತ್ತೂರಿಗೆ ಬಂದು ನಾಪತ್ತೆಯಾಗಿರುವ ಘಟನೆ ನಡೆದಿದೆ. ಮದುವೆಯಾಗಿದ್ದ ಮಹಿಳೆ 11 ತಿಂಗಳ ಮಗು ಹಾಗೂ ಗಂಡನನ್ನು ಬಿಟ್ಟು ಪ್ರಿಯಕನನ್ನು ನೋಡಲು ಫ್ರೀ ಬಸ್ ನಲ್ಲಿ ಹತ್ತಿ ಪುತ್ತೂರಿಗೆ ಬಂದಿದ್ದಾರೆ.
ಈಕೆಗೆ ಮದುವೆ ಆಗುವ ಮೊದಲೇ ಪುತ್ತೂರಿನ ಯುವಕನ ಜೊತೆ ಪ್ರೀತಿ ಶುರುವಾಗಿತ್ತು. ಆದರೆ ಮದುವೆಯಾಗಿದ್ದು ಮಾತ್ರ ಬೇರೆ ಯುವಕನ ಜೊತೆ. ಮದುವೆಯಾದರೂ ತನ್ನ ಪ್ರಿಯಕನ ಜೊತೆ ಒಡನಾಟದಲ್ಲಿದ್ದಳು ಎನ್ನಲಾಗಿದೆ. ವಿವಾಹಿತ ಮಹಿಳೆಯ ಪ್ರಿಯಕರ ಕೋಡಿಂಬಾಡಿ ಸಮೀಪದಲ್ಲಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದನಂತೆ. ಗಂಡನ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಿ ಬರುತ್ತೇನೆಂದು ಮನೆಯಿಂದ ಹೇಳಿ ಎಸ್ಕೇಪ್ ಆಗಿದ್ದಾರೆ. ಆಧಾರ್ ಕಾರ್ಡ್ ಬಳಸಿ ಬಸ್ಸಿನಲ್ಲಿ ಫ್ರೀಯಾಗಿ ಪ್ರಯಾಣಿಸಿದ್ದಾಳೆ. ಈ ಘಟನೆ ತಿಳಿದ ಎರಡೂ ಮನೆಯವರು ಮಹಿಳೆ ಹಾಗೂ ಆಕೆಯ ಪ್ರಿಯಕರನಿಗಾಗಿ ಹುಡುಕಾಟ ಮಾಡಿದ್ದಾರೆ. ಈ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರ್ ಎಂಬವರು, ಇವರಿಬ್ಬರನ್ನು ಹುಡುಕಿಕೊಂಡು ಬಂದ ಕುಟುಂಬಸ್ಥರಿಗೆ ಧೈರ್ಯ ಹೇಳಿ, ನೆರವು ನೀಡಿದ್ದಾರೆ. ಟವರ್ ಲೊಕೇಶನ್ ಮೂಲಕ ಪತ್ತೆ ಹಚ್ಚಿದಾಗ ಪುತ್ತೂರಿನಿಂದ ಸಿದ್ಧಕಟ್ಟೆಗೆ ಪರಾರಿಯಾದ ಬಗ್ಗೆ ಮಾಹಿತಿ ತಿಳಿದಿದೆ.