ಉಡುಪಿ: ಎಲೆಅಡಿಕೆ ಸೇವಿಸುವ ವೇಳೆ ಸುಣ್ಣವೆಂದು ಇಲಿ ಪಾಷಾಣವನ್ನು ವೀಳ್ಯದೆಲೆಗೆ ಸೇರಿಸಿ ತಿಂದು ಮೃತಪಟ್ಟ ಘಟನೆ ಉಡುಪಿ ತಾಲೂಕಿನ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಸಾಧು ಪೂಜಾರ್ತಿ (71) ಎಂದು ಗುರುತಿಸಲಾಗಿದೆ. ಸಾಧು ಪೂಜಾರ್ತಿಗೆ ಎಲೆ ಅಡಿಕೆ ಸೇವಿಸುವ ಅಭ್ಯಾಸವಿತ್ತು. ಎಂದಿನಂತೆ ಫೆ.6 ರಂದು ಬೆಳಗ್ಗೆ 6 ಗಂಟೆಗೆ ವೀಳ್ಯದೆಳೆ ಸೇವಿಸುತ್ತಿರುವಾಗ ವಿಳ್ಯದೆಲೆಗೆ ಸುಣ್ಣವೆಂದು ತಿಳಿದು ಇಲಿ ಪಾಷಾಣವನ್ನು ತಿಂದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಫೆ.12 ರಂದು ಮೃತಪಟ್ಟಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.